Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಜೀವನಾಡಿ-ಬಿ. ಮುನೇಗೌಡ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೊಕಿನ ತೂಬಗೆರೆ ಹೋಬಳಿ ಮೇಲಿನಜೋಗನಹಳ್ಳಿ (ಎಸ್ ಎಸ್ ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೆಪಾಳ್ಳ ಗ್ರಾಮದಲ್ಲಿನ ದೇವರ ಬೆಟ್ಟ ಶ್ರೀ ಶನೇಶ್ವರ ಸ್ವಾಮಿಯ ರಥೋತ್ಸವದ ಪ್ರಯುಕ್ತ  ಇಂಚರ ಸಾಂಸ್ಕೃತಿಕ ಕಲಾ ಸಂಘ ಹಾಗು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಇವರುಗಳ ಸಹಯೋಗದೊಂದಿಗೆ  ಸಂಗೀತ ರಸಮಂಜರಿ 2026 ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ  ಬಿ ಮುನೇಗೌಡ ಭಾಗವಹಿಸಿ ಮಾತನಾಡಿ ನಮ್ಮ ಸಂಸ್ಕೃತಿಯ ಜೀವನಾಡಿಯಾಗಿರುವ ಜಾನಪದ ಕಲೆಗಳ ಉಳಿವಿಗೆ ಸರ್ಕಾರದ ಪ್ರೋತ್ಸಾಹ, ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ನಿರಂತರ ತರಬೇತಿ ಅತ್ಯಗತ್ಯ.

ಸ್ಥಳೀಯವಾಗಿ ಜಾನಪದ ಲೋಕ ದಂತಹ ಸಂಸ್ಥೆಗಳು ಕಲೆಗೆ ವೇದಿಕೆ ಕಲ್ಪಿಸುತ್ತಿದ್ದು, ಶಾಲಾ-ಕಾಲೇಜುಗಳ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳ ಬಗ್ಗೆ ಅರಿವು ಮೂಡಿಸುವುದರಿಂದ  ಹಾಗು ಜಾತ್ರೆ, ಉತ್ಸವ ಮತ್ತು ವಿಶೇಷ ಕಾರ್ಯಕ್ರಮಗಳಲ್ಲಿ ಜಾನಪದ ಕಲಾವಿದರಿಗೆ ಹೆಚ್ಚಿನ ಅವಕಾಶ ಹಾಗೂ ಆರ್ಥಿಕ ಪ್ರೋತ್ಸಾಹ ನೀಡುವುದರಿಂದ ನಮ್ಮ ಸಂಸ್ಕೃತಿಯ ಜನಪದ ಕಲೆ ಉಳಿಯಲು ಸಾದ್ಯ ಎಂದರು.

 ಕಾರ್ಯಕ್ರಮದಲ್ಲಿ ಮಂಗಳವಾದ್ಯ ಜನಪದ ಗೀತೆ, ತತ್ವಪದ, ರಂಗಗೀತೆ, ಗಾಯನ, ಸುಗಮ ಸಂಗೀತ, ಭಜನೆ ಮಾಡುವ ಮೂಲಕ ನಮ್ಮ ಸಂಸ್ಕೃತಿಯ ಹಬ್ಬಗಳು ಭಾಷೆ ವಾಸ್ತು ಶಿಲ್ಪ ಮತ್ತು ಸಾಹಿತ್ಯದ ಶೋಬಾನೆ ಪದ ಭಕ್ತಿಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ಶ್ರೀನಿವಾಸ್ ಗುರೂಜಿ ವಹಿಸಿದರು. ಈ ಸಂದರ್ಭದಲ್ಲಿ ಮೇಲಿನಜೂಗಾನಹಳ್ಳಿ (ಎಸ್ ಎಸ್ ಘಾಟಿ) ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಆರ್. ನಾರಾಯಣಸ್ವಾಮಿ, ಎಸ್. ಪುರುಷೋತ್ತಮ್, ಇಂಚರ ಸಾಂಸ್ಕೃತಿಕ ಕಲಾ ಸಂಘ ಕಾರ್ಯದರ್ಶಿ ಮುನಿರತ್ನಮ್ಮ.  ಸದಸ್ಯರಾದ ಬಚ್ಚಹಳ್ಳಿ ನಾಗರಾಜ್ ಉಪಾಧ್ಯಕ್ಷ ದೇವರಾಜ್,

ಜಾನಪದ ಕಲಾವಿದ ಜೂಗಾನಹಳ್ಳಿ ವೆಂಕಟೇಶ ಟಿ. ವೈ., ಲಕ್ಷ್ಮೀನಾರಾಯಣ,ಶಾಂತಮ್ಮ, ಕೇಶವಮೂರ್ತಿ, ನಾಗೇಶ, ಓಬಮ್ಮ ,ಸರೋಜಮ್ಮ, ಕುಸುಮ,ಪರಂಪರೆ ಸಂಸ್ಥೆಯ ಅಧ್ಯಕ್ಷ ಹನುಮಂತರಾಯಪ್ಪ ಹಾಜರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.