ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮೇಲಿನಜೋಗನಹಳ್ಳಿ (ಎಸ್ ಎಸ್ ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೆಪಾಳ್ಳ ಗ್ರಾಮದಲ್ಲಿನ ದೇವರ ಬೆಟ್ಟ ಶ್ರೀ ಶನೇಶ್ವರ ಸ್ವಾಮಿಯ ರಥೋತ್ಸವದ ಪ್ರಯುಕ್ತ ಯಲಹಂಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ.ಹಾಗು ಪರಂಪರೆ (ನೋ) ಸಂಸ್ಕೃತಿ ಹಾಗೂ ಸಾಮಾಜಿಕ ಸಂಸ್ಥೆ ಕಾಕೋಳು ಇವರುಗಳ ಸಹ ಯೋಗದೊಂದಿಗೆ ಜಾನಪದ ಸಂಗೀತ 2026 ರಸಮಂಜರಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜನಪದ ಗೀತೆ, ತತ್ವಪದ, ರಂಗಗೀತೆ, ಗಾಯನ, ಸುಗಮ ಸಂಗೀತ, ಭಜನೆ ಮಾಡುವ ಮೂಲಕ ನಮ್ಮ ಸಂಸ್ಕೃತಿಯ ಹಬ್ಬಗಳು ಭಾಷೆ ವಾಸ್ತು ಶಿಲ್ಪ ಮತ್ತು ಸಾಹಿತ್ಯದ ಶೋಬಾನೆ ಪದ ಭಕ್ತಿಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ಶ್ರೀನಿವಾಸ್ ಗುರೂಜಿ ವಹಿಸಿದರು. ಈ ಸಂದರ್ಭದಲ್ಲಿ ಬಿ. ಮುನೇಗೌಡ,ವೆಂಕಟೇಶ, ರಾಜ್ಯ ಮಟ್ಟದ ಕಲಾವಿದೆ ಓಬಮ್ಮ,
ಪರಂಪರೆ (ನೋ) ಸಂಸ್ಕೃತಿ ಹಾಗೂ ಸಾಮಾಜಿಕ ಸಂಸ್ಥೆ ಅಧ್ಯಕ್ಷ ಚಿಕ್ಕ ಹನುಮಂತರಾಯಪ್ಪ, ಉಪಾಧ್ಯಕ್ಷ ಮುನಿಆಂಜನಪ್ಪ, ಕಾರ್ಯದರ್ಶಿ ಅಂಜಿನಮ್ಮ. ಸರೋಜಮ್ಮ ನಿರ್ಮಲಮ್ಮ, ಇಂಚರ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಮುನಿರತ್ನಮ್ಮ, ಜಾನಪದ ಕಲಾವಿದರಾದ ವೈ. ಟಿ. ಲಕ್ಷ್ಮಿ ನಾರಾಯಣ್, ಶಾಂತಮ್ಮ, ಕೇಶವಮೂರ್ತಿ,ಮುಂತಾದವರು ಹಾಜರಿದ್ದರು.


