ಚಂದ್ರವಳ್ಳಿ ನ್ಯೂಸ್, ಹಾಸನ:
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಹಾಸನಕ್ಕೆ ಭೇಟಿ ನೀಡಿ, ನಾಡಿನ ಅಧಿದೇವತೆ ಜಗನ್ಮಾತೆ ಶ್ರೀ ಹಾಸನಾಂಬೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಪುಣ್ಯಕ್ಷಣದಲ್ಲಿ ನಾಡಿನ ಜನತೆಗೆ ಒಳಿತಾಗಲಿ, ರಾಜ್ಯದ ಸಮಸ್ತ ಜನರ ಮನೆ-ಮನಗಳಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಅವರು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದರು.
ತಾಯಿ ಹಾಸನಾಂಬೆಯ ಆಶೀರ್ವಾದದಿಂದ ನಾಡಿನ ಜನರ ಬದುಕಿನಲ್ಲಿ ಸಂತೋಷ, ಆರೋಗ್ಯ ಮತ್ತು ಸೌಭಾಗ್ಯ ವೃದ್ಧಿಯಾಗಲಿ ಎಂಬ ಹಾರೈಕೆಯೊಂದಿಗೆ ದೇವಿಯ ದರ್ಶನ ಪಡೆದರು.




