Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭೂತ ನೆರಿಗೆ ಸಂಭ್ರಮ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆಯಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಭೂತ ನೆರಿಗೆ ಹಬ್ಬ
  7-7-2025 ಸೋಮವಾರ ಗಂಟೆಗೆ ಸಂಭ್ರಮದಿಂದ  ನೆರೆವೇರಿತು. 

ಹುಟ್ಟಲು ಗೋಪುರದ ಬಳಿಯಿಂದ ತಮಟೆ ವಾದ್ಯಗಳೊಂದಿಗೆ ಆರಂಭವಾದ ಭೂತಗಳ ಆರ್ಭಟ ಊರಿನ ವಿವಿಧಡೆ ಸಂಚರಿಸಿ ಶ್ರೀ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮುಕ್ತಾಯವಾಗುತ್ತದೆ. 

 ಕೆಂಚಣ್ಣ ವೇಷಾಧಾರಿಯಾಗಿ ಶೇಖರ್ ಧರಿಸಿದರೆ  ಕರಿಯಣ್ಣ ವೇಷಾಧಾರಣೆಯನ್ನು ಮಂಜುನಾಥ್ ಧರಿಸಿದ್ದರು ಕೆಂಚಣ್ಣ ಕರಿಯಣ್ಣ ಭೂತ ವೇಷಾಧಾರಿಗಳು ನರಸಿಂಹಸ್ವಾಮಿ ದೇವಾಲಯದಿಂದ ಆರಂಭಗೊಂಡು  ಭಕ್ತಾದಿಗಳಿಂದ ಪೂಜೆ ಸ್ವೀಕರಿಸಿಪೂಜಾರಿ ಆನಂದ್  ಅವರಿಂದ ಧೂಪ ಹಾಕಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು 

ಇದನ್ನು ವಿಕ್ಷೀಸಲು ಹೋಬಳಿ ಮತ್ತು ತಾಲ್ಲೂಕಿನ ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು ಸಾವಿರಕ್ಕೂ ಹೆಚ್ಚು  ಜನತೆ  ಭೂತಗಳ ಆರ್ಭಟವನ್ನು ನೋಡಿ ಭಗವಂತನ ಕೃಪೆಗೆ ಪಾತ್ರರಾದರು.  

ಐತಿಹಾಸಕ ಹಿನ್ನೆಲೆ:
 ಪ್ರತಿ ವರ್ಷ ಆಷಾಡ ಮಾಸದ ಏಕಾದಶಿಯಾದಾ ಮಾರನೇ ದಿನ ದ್ವಾದಶಿ ಯಂದು ಪುರಾತನ ಕಾಲದಿಂದಲೂ ತೂಬಗೆರೆ ಗ್ರಾಮದಲ್ಲಿ ಈ ಭೂತನೆರಿಗೆ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ ಅಲ್ಲದೆ ವಿಷ್ಣುವಿನ ದ್ವಾರಪಾಲಕರಾದ ಜಯ ವಿಜಯರು ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಪರಿವರ್ತನೆಗೊಂಡಿದ್ದು ಈ ಹಬ್ಬವನ್ನು ಸುಮಾರು ೬೦೦ ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿರುವುದಾಗಿ ಗ್ರಾಮಸ್ಥರು ತಿಳಿಸುತ್ತಾರೆ

ಗ್ರಾಮದಲ್ಲಿ ಈ ಭೂತ ವೇಷಾಧಾರಣೆ ಮಾಡಿಕೊಂಡು ಸಂಚರಿಸುವುದರಿಂದ ಗ್ರಾಮದಲ್ಲಿ ಯಾವುದೇ ಭೂತ ಪ್ರೇತ ಪಿಶಾಚಿಗಳು ಸುಳಿಯುವುದಿಲ್ಲ ಎಂದು ನಂಬಿದ್ದಾರೆ, ಕೆಲ ಭಕ್ತರು ಬಾಳೆ ಹಣ್ಣು ಮತ್ತು  ತೂಬಗೆರೆ ಗ್ರಾಮದ ವಿಶೇಷ ರೀತಿಯ ಹಲಸಿನ ಹಣ್ಣಿನ ರಸಾಯನ ವನ್ನು ತಯಾರಿಸಿ ಭೂತ ವೇಷಾಧರಿಗಳು ಜನತೆಯ ಮೇಲೆ ಎರಗಲು ಬಂದಾಗ ರಸಾಯನವನ್ನು ನೀಡುತ್ತಾರೆ

ಅಲ್ಲದೆ ಕೆಲ ಭಕ್ತರು ಕೋಳಿಗಳನ್ನು ನೀಡುತ್ತಾರೆ ಭೂತಗಳನ್ನು ಶಾಂತಗೊಳಿಸಲು ಬಕೀಟುಗಟ್ಟಲೆ ರಸಾಯವನ್ನು ತಿನ್ನಿಸಲಾಗುತ್ತದೆ.ಕೊನೆಯಲ್ಲಿ ಭೂತ ವೇಷಧಾರಿಗಳು ಕೋಳಿಗಳ ರಕ್ತ ಹೀರುವುದೂ ಉಂಟು. ಭೂತಗಳು ಮನೆಯನ್ನು ಹೊಕ್ಕರೆ ಮಾಡಿದರೆ  ಯಾವುದೇ ಗ್ರಹಕಾಟವಿರುವುದಿಲ್ಲ ಎಂಬುದು ಜನರ ನಂಬಿಗೆಯಾಗಿದೆ. 

ವೇಷಧಾರಿಗಳ ನರ್ತನ:
ಗ್ರಾಮದ ಹೊರವಲಯದ ನರಸಿಂಹ ಸ್ವಾಮಿ ದೇವಾಲಯದ ಬಳಿ ಕೋಪಗೊಳ್ಳುವ ಕೆಂಚಣ್ಣ ಕರಿಯಣ್ಣ ಕೈಯಲ್ಲಿ ಭೂತದ ಗುರಾಣಿ ಹಿಡಿದು, ನರ್ತನ ಮಾಡುತ್ತ ಕೈಯಲ್ಲಿನ ಭೆತ್ತವನ್ನು ಬೀಸುತ್ತ ಜನರ ಗುಂಪಿನತ್ತ ನುಗ್ಗಲು ಆರಂಭಿಸಿ, ಕೋಪಗೊಂಡಿರುವ ಭೂತಗಳನ್ನು ಸಮಾಧಾನ ಪಡಿಸಲು ಹಲಸಿನ ಹಣ್ಣಿನಿಂದ ತಯಾರಿಸಲಾದ ರಸಾಯನವನ್ನು ಭೂತಗಳಿಗೆ ತಿನ್ನಿಸಲಾಯಿತು. ನಂತರ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಬಳಿ ಭೂತ ನೆರಿಗೆ ಮುಕ್ತಾಯವಾಗುತ್ತದೆ.

 ಕೆಪಿಸಿಸಿ ಸದಸ್ಯ ಎಸ್. ಅರ್. ಮುನಿರಾಜು,ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎನ್. ಅರವಿಂದ್ ಹಾಜರಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ