Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಪರ್ಧಾತ್ಮಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಇದ್ದರೆ, ಸಾಧನೆ ಸಾಧ್ಯ: ರಾಮ್‌ ಪ್ರಸಾತ್‌ ಮನೋಹರ್‌

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಂದೆ ಪೋಸ್ಟ್‌ಮಾಸ್ಟರ್‌
, ತಾಯಿ ಅಂಗನವಾಡಿ ಕಾರ್ಯಕರ್ತೆ. ನಾನು ಬಡ ಕುಟುಂಬದಿಂದ ಬಂದವನು. ಜೀವನದಲ್ಲಿ ನಿಖರ ಗುರಿ, ಕಠಿಣ ಪರಿಶ್ರಮ, ಶಿಸ್ತು, ಸಚ್ಚಾರಿತ್ರ್ಯ ಇದ್ದಲ್ಲಿ ಯಾವುದೇ ಪರೀಕ್ಷೆಯಲ್ಲಾದರೂ ಯಶಸ್ವಿಯಾಗಿ ಉತ್ತೀರ್ಣರಾಗಬಹುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡ್ಲ್ಯೂಎಸ್‌ಎಸ್‌ಬಿ) ಅಧ್ಯಕ್ಷರಾದ ಶ್ರೀ ರಾಮ್‌ಪ್ರಸಾತ್‌ಮನೋಹರ್‌ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿರುವ ಆಸಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಆರಂಭಿಸಿರುವ "ಅಸ್ಪೈರ್‌ವಿತ್‌ರಾಮ್‌ಐಎಎಸ್‌" ಎಂಬ ಉಪನ್ಯಾಸಕ ಮಾಲಿಕೆಯ ಭಾಗವಾಗಿ ವಿಜಯನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜೀವನದಲ್ಲಿ ಕುಟುಂಬ ಸಮಸ್ಯೆಗಳು ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ನಮ್ಮಲ್ಲಿರುವ ನಮ್ಮ ಶಕ್ತಿಯನ್ನು ನಾವೇ ಎಚ್ಚರಗೊಳಿಸಿಕೊಳ್ಳಬೇಕು. ಸಮಾಜಕ್ಕೆ ಯಾವುದೇ ಸೋಲುಗಳು ಬೇಕಿಲ್ಲ. ಬೇಕಿರುವುದು ಗೆಲುವು ಅಷ್ಟೇ. ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದಲೇ ನಿಮ್ಮ ವ್ಯಾಸಂಗ ಮುಂದುವರಿಸಿ ಎಂದು ಅತ್ಮವಿಶ್ವಾಸ ತುಂಬಿದರು. 

ನಮ್ಮ ತಂದೆಗೆ ಬರುತ್ತಿದ್ದ ವೇತನದಲ್ಲಿ ನಮ್ಮ ಕುಟುಂಬ ನಡೆಸುವುದು ಕಷ್ಟವಾಗಿತ್ತು. ಈ ವೇಳೆ ನನಗೆ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್‌ಸೀಟು ಸಿಕ್ಕಿದರೂ ನಾನು ಓದಲು ಸಾಧ್ಯವಾಗಿಲ್ಲ. ಕೊನೆಯದಾಗಿ ಸರಕಾರಿ ಕಾಲೇಜಿನಲ್ಲಿ ಪಶುವೈದ್ಯಕೀಯ ಪದವಿ ಮುಗಿಸಿದೆ. ನನಗೆ ವಿಜ್ಞಾನಿಯಾಗಬೇಕೆಂಬ ಬಯಕೆ ಇತ್ತು. ಇದಕ್ಕಾಗಿ ಕೆಲವು ಯೋಜನೆ ರೂಪಿಸಿದ್ದೆ. ಅದನ್ನು ಒಪ್ಪಿ ಕೇಂದ್ರ ಸರಕಾರ ಶಿಷ್ಯವೇತನ ನೀಡಲು ಮುಂದಾಗಿತ್ತು.

ಇದುವೇ ನನ್ನ ಜೀವನದ ಆಧಾರಸ್ತಂಭವಾಗಿತ್ತು. ಮುಷ್ಕರದಿಂದಾಗಿ ಕಾಲೇಜು ಸ್ಥಗಿತಗೊಂಡ ಕಾರಣದಿಂದ  ಶಿಷ್ಯವೇತನ ಕೈತಪ್ಪಿ ಹೋಯಿತು. ಆ ವೇಳೆ ನಾನು ಆತ್ಮವಿಶ್ವಾಸ ಕಳೆದುಕೊಂಡೆ.  ಎಷ್ಟೋ ದಿನ ಕಣ್ಣೀರಿನಲ್ಲೇ ಕಳೆದೆ. ನನ್ನ ಸ್ನೇಹಿತನ ಪ್ರೋತ್ಸಾಹಧಾಯಕ ಮಾತುಗಳಿಂದ ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆ ಆರಂಭಿಸಿ ಇಂದು ನಿಮ್ಮ ಮುಂದೆ ನಿಂತಿದ್ದೇನೆ ಎಂದರು.

ಕಷ್ಟಗಳು ನಮ್ಮ ಜೀವನವನ್ನು ಬುಡಮೇಲು ಮಾಡುತ್ತವೆ. ಆದರೆ, ನಮ್ಮ ಛಲ ಬಿಡಬಾರದು. ನಾನು 300 ರೂ. ದಿನಗೂಲಿಗಾಗಿ ಪಶುವೈದ್ಯಕೀಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೇ ಧೈರ್ಯದಿಂದ ಮುನ್ನುಗಿದ್ದರೆ, ಯಶಸ್ವು ಕಟ್ಟಿಟ್ಟ ಬುತ್ತಿ.

ದುಶ್ಚಟಗಳಿಂದ ದೂರವಿರಿ. ಇದು ನಿಮ್ಮನ್ನು ವಿನಾಶಕ್ಕೆ ಕರೆದೊಯ್ಯಲಿದೆ. ಒಳ್ಳೆಯ ಪುಸ್ತಕಗಳನ್ನು ಓದಿ. ಒಳ್ಳೆಯ ಆರೋಗ್ಯ ಕಾಯ್ದುಕೊಳ್ಳಿ. ಉತ್ತಮ ಸಂವಹನ ಕೌಶಲ್ಯ ರೂಢಿಸಿಕೊಳ್ಳಿ ಎಂದು ತಿಳಿಸಿದರು.

ಏನೇನು ಓದಬೇಕು: ಸ್ಪರ್ಧಾತ್ಮಕ ಪರೀಕ್ಷೆಗೆ ಏನನ್ನು ಓದಬೇಕು ಎಂಬುದನ್ನು ವಿದ್ಯಾರ್ಥಿಗಳು ಮೊದಲು ಅರಿತುಕೊಳ್ಳಬೇಕು. ಸುಖಾ ಸುಮ್ಮನೆ ಎಲ್ಲವನ್ನು ಆಳವಾಗಿ ಓದುವುದರಿಂದ ಪ್ರಯೋಜನವಿಲ್ಲ. ದಿನಪತ್ರಿಕೆಗಳು, ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಚೆನ್ನಾಗಿ ಓದಬೇಕು. ಇದರ ಜತೆಗೆ ಬರವಣಿಗೆಯ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ: ನನ್ನಂತೆ ಬಹಳಷ್ಟು ಬಡ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ, ಕೆಪಿಎಸ್ಸಿ ಹಾಗೂ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವು ಕಾಣಬೇಕೆಂಬ ಬಯಕೆ ಇದೆ. ಆದರೆ, ಆರ್ಥಿಕ ಪರಿಸ್ಥಿತಿ ಇದಕ್ಕೆ ಸಹಾಯ ಮಾಡದೇ ಇರುಬಹುದು. ಇದಕ್ಕಾಗಿ ನಾನು ಈ ಕಾರ್ಯಕ್ರಮ ಆರಂಭಿಸಿದ್ದೇನೆ. ಇದರಲ್ಲಿ ಉಚಿತವಾಗಿ ಮಾರ್ಗದರ್ಶನ ಸಿಗಲಿದೆ. ನನ್ನ ಪ್ರಕಾರ ತರಬೇತಿಗಿಂತ ಮಾರ್ಗದರ್ಶನ ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಶುಭಾ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೋಶದ ಸಮನ್ವಯಾಧಿಕಾರಿ ಡಾ.ಎನ್‌.ಶೋಭಾ ರಾಣಿ ಇತರರು ಇದ್ದರು.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ