Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Education News

ಜೀವನ ಪ್ರೀತಿಯ ಪರಂಪರೆಯಲ್ಲಿ ಬೆಳೆದು ಬಂದ ಕನಕ ದಾಸರು

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜೀವನ ಪ್ರೀತಿಯ ಪರಂಪರೆಯಲ್ಲಿ ಬೆಳೆದು ಬಂದ ಕನಕ ದಾಸರು ವ್ಯಾಸರಾಯರ ಶಿಷ್ಯರಾಗಿದ್ದರೂ ಕೂಡ ಜಗತ್ತಿಗೆ ಸಾಮಾಜಿಕ ಸಾಮರಸ್ಯವನ್ನು ಸಾರಿದರು ಎಂದು ಕನ್ನಡ ಪ್ರಾಧ್ಯಾಪಕಿ ಪ್ರೊ ಸಲ್ಮಾ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜು ಸ್ವಾಯತ್ತ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನಕ ದಾಸರ ಜಯಂತಿ ಆಚರಣೆ ಕಾರ್ಯಕ್ರಮ ದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

 ಸಮಾಜದ ಜಾತಿ ಮತ್ತು ವರ್ಗ ಸಂಘರ್ಷದ ಸೂಕ್ಷ್ಮ ನೆಲೆಗಳನ್ನು ಕನಕದಾಸರ ಬರಹಗಳಲ್ಲಿ ಕಾಣಬಹುದು. ತನ್ನನ್ನು ಧಿಕ್ಕರಿಸಿದ ಸಮಾಜದ ಬಗ್ಗೆ ಅಸಹನೆಯ ಚಿಂತನೆ ಬೆಳೆಸಿಕೊಂಡಿದ್ದರೂ ಸಹ  ಸಮಾಜವನ್ನು ಸಮಾನತೆಯಿಂದ ಕಂಡರು. ಅನುಭಾವಿಕ, ಸಂತ, ವೈಚಾರಿಕ ಚಿಂತನೆಗಳನ್ನು ಸಮಾಜದ ಜನರ ಮನಸ್ಸಿನಲ್ಲಿ ಬಿತ್ತುವ ಮೂಲಕ  ಸೌಹಾರ್ದತೆ ಕೆಲಸವನ್ನು ತಮ್ಮ ರಚನೆಗಳಲ್ಲಿ ಮಾಡಿದರು.

ಅವರ ಕೀರ್ತನೆಗಳಲ್ಲಿ ಅಂತ ರಂಗದ ಅನುಭಾವಗಳಿವೆ. ರಾಮಧಾನ್ಯ ಚರಿತ್ರೆಯಲ್ಲಿ ನಿರೂಪಿತವಾಗಿರುವ ರಾಗಿ ಮತ್ತು ಅಕ್ಕಿ ನಡುವಿನ  ವಾಗ್ವಾದ ಇಂದಿಗೂ ಪ್ರಸ್ತುತ ವಾಗಿದೆ. ಅಲ್ಲದೆ ಜಾತಿ, ಧರ್ಮ, ವರ್ಗ, ವರ್ಣ, ಭಾಷೆ, ಸಂಸ್ಕೃತಿ  ಮೇಲು ಕೀಳು ಮುಂತಾದ ಚಿಂತನೆಗಳನ್ನು ಬಿಚ್ಚಿಡುತ್ತಲೇ ಸಮಾನತೆಯ ಸಂದೇಶವನ್ನು ಸಾರಿದ್ದಾರೆ ಎಂದು ಕೃತಿಗಳ ಹಿನ್ನಲೆಯಲ್ಲಿ ವಿವೇಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ ಜೆ. ಕರಿಯಪ್ಪ ಮಾಳಿಗೆ ಮಾತನಾಡಿಮದ್ಯಕಾಲೀನ ಚರಿತ್ರೆಯ ಭಕ್ತಿ ಚಳುವಳಿ ಹಲವು ಸಾಂಸ್ಕೃತಿಕ ಪಲ್ಲಟಗಳಿಗೆ ಕಾರಣವಾಗಿದೆ. ವಚನ ಸಾಹಿತ್ಯ, ಕೀರ್ತನ ಸಾಹಿತ್ಯ ಮತ್ತು ತತ್ವಪದ ಸಾಹಿತ್ಯಗಳು  ಭಕ್ತಿಯನ್ನ ಚಳುವಳಿಯ ನೆಲೆಯಲ್ಲಿ ಕಟ್ಡಿಕಡಿ ಸಾಮಾಜಿಕ ಧಾರ್ಮಿಕ ರಾಜಕೀಯ ವ್ಯವಸ್ಥೆಯ ಬದಲಾವಣೆಗೆ ಕಾರಣವಾದವು.

ಕನಕದಾಸರು ಅಸಹಿಷ್ಣತೆಗೆ ಒಳಗಾಗಿ ಅದರ ವಿರುದ್ದ ಹೊರಾಡಿ ಸಮಾನತೆ ಸಾಮರಸ್ಯದ ತತ್ವವನ್ನು ಬಿತ್ತಿದ್ದಾರೆ. ಜೀವಕ್ಕಿಂತ ಪ್ರಾಣ ದೊಡ್ಡದು, ಪ್ರಾಣಕ್ಕಿಂತ ಮಾನ ದೊಡ್ಡದು ಮಾನಹೀನನಾಗಿ ಬಾಳುವ ಮನುಜನ್ಯಾತಕೆ ಎಂದು ಮಾನವ ಜನ್ಮದ ಮಹತ್ವ ಸಾರಿದ್ದಾರೆ.

ಈ ಹೊತ್ತಿನ ಸಾಮಾಜಿಕ ಬಿಕ್ಕಟ್ಟುಗಳಿಗೆ ಕನಕದಾಸರ ತತ್ವಗಳಲ್ಲಿ ಪರಿಹಾರವಿದೆ.ಕನ್ನಡ ಸಾಹಿತ್ಯ ತನ್ನ ಪರಂಪರೆಯ ಉದ್ದಕ್ಕೂ  ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಲೇ ಬಂದಿದೆ. ನಮ್ಮಗಳ ಸಂಕುಚಿತ ಮನೋಭಾವದಿಂದ ಹೊರಬಂದು ಸಹಿಷ್ಣುತೆಯ ಸಮಾಜವನ್ಮು  ಮಾನವ ಧರ್ಮದ ಮಹತ್ವನ್ನು ನಡೆನುಡಿಯಲ್ಲಿ ಅಳವಡಿಸಿಕೊಳ್ಳಬೇಕಿದೆ.  ನಮ್ಮ ನಮ್ಮ ನಡೆ ನುಡಿಗಳಲ್ಲಿ ಕನಕ ಚಿಂತನೆಗಳು  ಪ್ರಸ್ತುತವಾಗಬೇಕಿದೆ. ಕನಕ ಕನಕ ಕನಡದ ವಿವೇಕ ಎಂದು ಹೇಳಿದರು.

ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ ಜಗನ್ನಾಥ ಮಾತನಾಡಿ ಕನಕದಾಸರ ವೃತ್ತಿಬದುಕಿನ ಪಯಣದಲಿನ ಸಂಘರ್ಷಗಳು ಹೇಗ ಮಹತ್ವದ ತಿರುವುಗಳನ್ನು ಪಡೆದವು ಎನ್ನುವುದನ್ನು ಸಂಕ್ಷಿಪ್ತವಾಗಿ ನೀಡಿದರು.

ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ ಬಿ ಸುರೇಶ್, ಸ್ವಾಯತ್ತ ಸಂಸ್ಥೆ ಸಂಚಾಲಕ ಪ್ರೊ ರಮೇಶ್, ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ ಭಾನುಪ್ರಕಾಶ್, ಕನ್ನಡ ಪ್ರಾಧ್ಯಾಪಕ ಪ್ರೊ ಮಂಜುನಾಥ , ಕಾಲೇಜಿನ ಅಧೀಕ್ಷಕ ಹರಿಶ್ ಬಾಬು ಇದ್ದರು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು