Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಾನಂಗಳ ದಲ್ಲಿ ಚಿತ್ತಾರ ಮೂಡಿಸಿದ ಗಾಳಿಪಟ ಸ್ಪರ್ಧೆ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಮ್ಮ ಜನಸೇನಾ ಸಂಘಟನೆ ವತಿಯಿಂದ ಐದನೇ ವರ್ಷದ ಜಿಲ್ಲಾ ಮಟ್ಟದ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

   ನಗರ ಹೊರ ವಲಯದ ಭುವನೇಶ್ವರಿ ನಗರದ ಮುನಿನಂಜಪ್ಪ ನವರ ಜಮೀನಿನಲ್ಲಿ ನಡೆದ ಗಾಳಿ ಪಟ ಸ್ಪರ್ಧೆಯಲ್ಲಿ ಆಂಜನೇಯ, ಕಾಳಿ ಮಾತೇ, ಗಣೇಶ, ಅರ್ಧ ನಾರೀಶ್ವರ ಲಕ್ಷ್ಮಿ ನರಸಿಂಹ, ಆರ್. ಸಿ. ಬಿ. ಪಟಗಳು ಸೇರಿದಂತೆ ವಿವಿಧ ರೂಪದ, ವಿವಿಧ ಬಣ್ಣಗಳ ಅಲಂಕೃತ ಬೃಹಧಾಕಾರ ಹಾಗೂ ಸಣ್ಣ ಗಾತ್ರದ ಗಾಳಿ ಪಟಗಳು ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ನೆರೆದಿದ್ದ ಸಭಿಕರ ಗಮನ ಸೆಳೆದಿದ್ದವು. ಇದೆ ಸಂದರ್ಭದಲ್ಲಿ ಉತ್ತಮ ಆಕರ್ಷಣೆ ಹಾಗೂ ಅತಿ ಎತ್ತರಕ್ಕೇರಿದ ಪಟಗಳ ಸ್ಪರ್ದಿಗಳಿಗೆ ಬಹುಮಾನ ವಿತರಿಸಲಾಯಿತು.

     ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಮಹದೇವ್, ನಮ್ಮ ಜನಸೇನಾ  ಸಂಘಟನೆ ರಾಜ್ಯಾಧ್ಯಕ್ಷರಾದ ಡಾ. ಜಿ. ನರಸಿಂಹಯ್ಯ ಗೌರವಾಧ್ಯಕ್ಷ ಬಿ. ರಾಮಯ್ಯ, ಯುವ ಘಟಕದ ಅಧ್ಯಕ್ಷ ರಮೇಶ್, ಕಾರ್ಮಿಕ ಘಟಕದ ಅನ್ನಪೂರ್ಣ, ರಾಜ್ಯ ಮಹಿಳಾ ಅಧ್ಯಕ್ಷೆ ರಾಣಿ, ಅರುಣ್ ಕುಮಾರ್, ದೇವರಾಜ್, ಗೀತಾ, ಜಗನ್ನಾಥ್, ಪ್ರಕಾಶ್, ಬಾಬು ಮುನಿರಾಜ್ ಮುಂತಾದವರು ಪಾಲ್ಗೊಂಡಿದ್ದರು.

      “ಗಾಳಿಪಟ ಹಾರಾಟ ಸ್ಪರ್ಧೆಯು ವಿಶ್ವ ದಾದ್ಯಂತ ಜನಪ್ರಿಯ ಮನರಂಜನೆ ರೂಪವಾಗಿದ್ದು, ಈ ಜಾನಪದ ಕಲಾ ಪ್ರಾಕಾರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅದರಲ್ಲೂ ಗಾಳಿ ಪಟ ಹಾರಾಟವು ನಮ್ಮ ಕರ್ನಾಟಕದ ಪ್ರಮುಖ ಜಾನಪದ ಬಾಗವಾಗಿದೆ. ಆದುನಿಕ ಜಗತ್ತಿನಲ್ಲಿ ನಶಿಸುತ್ತಿರುವ ಗಾಳಿಪಟ ಹಾರಾಟದಂತ ಜಾನಪದ ಕಲೆಯನ್ನು ಪ್ರಸ್ತುತ ಯುವ ಪೀಳಿಗೆ ಉಳಿಸಿ ಬೆಳೆಸಬೇಕಿದೆ. ಕೆಂಪರಾಜ್, ಗಾಳಿಪಟ ಸ್ಪರ್ಧೆ ಆಯೋಜಕರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ