Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳ್ಳಿ ರಥದಲ್ಲಿ ಕೂರಿಸಿ ಸಮ್ಮೇಳನ ಅಧ್ಯಕ್ಷ ಎಂ.ಜಿ.ರಂಗಸ್ವಾಮಿಗೆ ಅದ್ಧೂರಿ ಮೆರವಣಿಗೆ

Advertisement
ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್
, ಹಿರಿಯೂರು:
ತಾಲೂಕು ಕಸಾಪ ಸಮ್ಮೇಳನ ಅಧ್ಯಕ್ಷರಾದ ಎಂ.ಜಿ.ರಂಗಸ್ವಾಮಿ ಅವರನ್ನು ಬೆಳ್ಳಿ ರಥದಲ್ಲಿ ಕೂರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಕಲಾ ತಂಡಗಳು ಸಾಂಪ್ರದಾಯಿಕ ನೃತ್ಯ ಮತ್ತು ಸಂಗೀತದೊಂದಿಗೆ ಸಮ್ಮೇಳನದ ವಿಷಯ ಪ್ರಚಾರ ಮಾಡಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದವರು ಕನ್ನಡ ಧ್ವಜ ಮತ್ತು ಭಾವುಟಗಳನ್ನು ಹಿಡಿದು "ಕನ್ನಡ ನಾಡು
, ಕನ್ನಡ ಭಾಷೆ, ಕನ್ನಡ ಮನೆ" ಎಂಬ ಘೋಷಣೆ ಕೂಗಿದರು.
ಕಸಾಪ ಸಮ್ಮೇಳನ ಅಧ್ಯಕ್ಷ ಎಂ.ಜಿ ರಂಗಸ್ವಾಮಿ ಅವರನ್ನು ಬೆಳ್ಳಿ ರಥದಲ್ಲಿ ಕೂರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇದೊಂದು  ಭವ್ಯವಾದ ಸಂಪ್ರದಾಯವಾಗಿದೆ.


ಇದು ಸಮ್ಮೇಳನ ಅಧ್ಯಕ್ಷರಿಗೆ ಸನ್ಮಾನ ಮತ್ತು ಗೌರವ ಸೂಚಿಸುವ ಒಂದು ಮಾರ್ಗವಾಗಿದೆ. ಬೆಳ್ಳಿ ರಥವು ಅಧ್ಯಕ್ಷರನ್ನು ಕೂರಿಸಿಕೊಂಡು ನಗರದ ರಸ್ತೆಗಳಲ್ಲಿ ಸಾಗುವಾಗ, ಸಾರ್ವಜನಿಕರು, ಕನ್ನಾಭಿಮಾನಿಗಳು, ಹಿತೈಷಿಗಳು ಸ್ನೇಹಿತರು ರಂಗಸ್ವಾಮಿ ಅವರಿಗೆ ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.

ಕಸಾಪ ಸಮ್ಮೇಳನ ಅಂಗವಾಗಿ ಅಧ್ಯಕ್ಷರನ್ನು ಮೆರವಣಿಗೆ ಮೂಲಕ ಕರೆದೊಯ್ಯುವುದು ಸಮ್ಮೇಳನದ ಒಂದು ಪ್ರಮುಖ ಅಂಗವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಸಮ್ಮೇಳನದ ಉದ್ಘಾಟನಾ ಸಮಾರಂಭದ ಭಾಗವಾಗಿ ನಡೆಸಲಾಗುತ್ತದೆ.

ಎಂ.ಜಿ.ರಂಗಸ್ವಾಮಿ ಅವರು ಹಿರಿಯೂರು ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದವರು. ಅವರು ಉಪನ್ಯಾಸಕರಾಗಿ, ಹವ್ಯಾಸಿ ಪತ್ರಕರ್ತರಾಗಿ, ಲೇಖಕರಾಗಿ ಜಿಲ್ಲೆಯಲ್ಲಿ ಸಾಕಷ್ಟು ಸಾಹಿತ್ಯದ ಕೆಲಸ ಮಾಡಿದ್ದಾರೆ. ಅವರ ಕೃತಿಗಳಾದ "ಹಿರಿಯೂರು ಸೀಮೆ ಜಾನಪದ", "ನೆಲದ ಸಂಕಥನ", "ದುರುಗ ಸೀಮೆ ಸಾಧಕರು" ಪ್ರಕಟವಾಗಿವೆ.
ಮೆರವಣಿಗೆಯಲ್ಲಿ ಭಾಗವಹಿಸಿದ ಕಲಾ ತಂಡದವರಿಗೆ ಸಮ್ಮೇಳನ ಸಮಿತಿಯವರು ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.
ಮೆರವಣಿಗೆ ನಂತರ ವೇದಿಕೆ ಮುಂಭಾಗದಲ್ಲಿ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು ಸಮ್ಮೇಳನಾಧ್ಯಕ್ಷ ಎಂ.ಜಿ ರಂಗಸ್ವಾಮಿ ಅವರನ್ನು ಶಾಲು ಹೊದಿಸಿ ಸನ್ಮಾಸಿ ಗೌರವಿಸಿದರು.


ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ಜಿ.ಪ್ರೇಮ್‌ಕುಮಾರ್‌, ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಸಕ್ಕರ ರಂಗಸ್ವಾಮಿ, ಮಹಮ್ಮದ್‌ ಫಕೃದ್ದೀನ್‌, ಗೌರವ ಕಾರ್ಯದರ್ಶಿಗಳಾದ ಎಚ್‌.ಕೃಷ್ಣಮೂರ್ತಿ, ಚಮನ್ ಷರೀಫ್, ಜಿ.ನಿಜಲಿಂಗಪ್ಪ, ಕಸಬಾ ಹೋಬಳಿ ಅಧ್ಯಕ್ಷ ಪೊಲೀಸ್‌ ಭೇಟೆ ಪ್ರಸನ್ನ, ಧರ್ಮಪುರ ಹೋಬಳಿ ಅಧ್ಯಕ್ಷ ಅಶೋಕ್‌, ಬಸವರಾಜ್‌, ರೈತ ಮುಖಂಡ ಹೊರಕೇರಪ್ಪ, ಪ್ರಹ್ಲಾದ್‌, ಚಂದ್ರಶೇಖರಯ್ಯ, ವೇದ, ಪುಷ್ಪ, ಷಫೀವುಲ್ಲಾ, ಗಡಾರಿ ಕೃಷ್ಣ, ಮಾರುತೇಶ್‌, ಈರಣ್ಣ ಇತರರು ಉಪಸ್ಥಿತರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ