Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಮಗ್ಗಿಪುಸ್ತಕ" ಬದುಕಿನ ಲೆಕ್ಕಾಚಾರ, ಮೊಬೈಲ್ ಹಾಡು ಬಿಡುಗಡೆ ಪೆ.13ರಂದು ತೆರೆಗೆ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹರಿವರಾಸನಂ ಕಥೆ
, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಮಗ್ಗಿಪುಸ್ತಕ ಇದೇ ೧೩ರಂದು ರಾಜ್ಯಾದ್ಯಂತ ತೆರೆಕಾಣಲಿದೆ.   ಚಿನ್ನಸ್ವಾಮಿ ಫಿಲಂಸ್ ಬ್ಯಾನರ್ ಅಡಿ ಸಿ.. ಎತಿರಾಜ್ ಸ್ನೇಹಿತರ ಜತೆಸೇರಿ ಈ ಚಿತ್ರ  ನಿರ್ಮಿಸಿದ್ದಾರೆ. ಜತೆಗೆ ನಿರ್ದೇಶಕರೂ  ಕೈಜೋಡಿಸಿದ್ದಾರೆ. ಮೊಬೈಲ್ ಬಗ್ಗೆ ಮಾಡಿರುವ  ಮಗ್ಗಿಪುಸ್ತಕ ಚಿತ್ರದ ಮೂರನೇ ಹಾಡು ಇತ್ತೀಚೆಗೆ  ಬಿಡುಗಡೆಯಾಯಿತು,

   ಈ ಸಂದರ್ಭದಲ್ಲಿ  ಮಾತನಾಡಿದ ನಿರ್ದೇಶಕ ಹರಿವರಾಸನಂ, ನಾನು ಸುಮಾರು 17 ವರ್ಷಗಳಿಂದ  20ಕ್ಕೂ ಹೆಚ್ಚು  ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ, ಇದು  ನನ್ನ ನಿರ್ದೇಶನದ ಮೊದಲ ಚಿತ್ರ.

ಮಗ್ಗಿ ಪುಸ್ತಕ ಮಕ್ಕಳ ಚಿತ್ರವಲ್ಲ, ಬದುಕಿನ ಲೆಕ್ಕಾಚಾರ, ನಮ್ಮ ಜೀವನವೇ ಒಂದು ಮಗ್ಗಿಪುಸ್ತಕ ಇದ್ದಂತೆ, ಇದರಲ್ಲಿ ಒಳ್ಳೆದನ್ನು  ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಜ್ಞಾನವನ್ನು ಗುಣಿಸಬೇಕು, ಅಜ್ಞಾನವನ್ನು ಭಾಗಿಸಬೇಕು ಎಂದು ಹೇಳಿದ್ದೇನೆ.  ಕೋವಿಡ್ ಟೈಮಲ್ಲಿ ನಾನು  ಬರೆದ ಅವನಿ ಎಂಬ ಕಾದಂಬರಿಯನ್ನು   ಆಧರಿಸಿ ಮಾಡಿದ  ಚಿತ್ರವಿದು. ಇದು ನಾಲ್ಕು ಆಯಾಮಗಳಲ್ಲಿ  ನಡೆಯುವ ಹೈಪರ್ ಲಿಂಕ್  ಚಿತ್ರ. ಜೀವನದ ಲೆಕ್ಕಾಚಾರ ಇದರಲ್ಲಿದೆ ಎಂದು  ಹೇಳಿದರು.



     ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಕ್ಷಾಗೌಡ ಮಾತನಾಡುತ್ತ ಈಗಾಗಲೇ ರಾಧಾರಮಣ, ಪುಟ್ಮಲ್ಲಿ  ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದೆ, ಈ ಚಿತ್ರದಲ್ಲಿ ತಾಯಿಯಾಗಿ ನಟಿಸಿದ್ದೇನೆ. ತಾಯಿಯ ಪಾತ್ರ ಅನ್ನೋದಕ್ಕಿಂತ ಚಾಲೆಂಜಿಂಗ್ ಪಾತ್ರ ಅದಾಗಿತ್ತು ಎಂದು ವಿವರಿಸಿದರು, ನಂತರ ನಟ  ಕೃಷ್ಣ ಮಹೇಶ್ ಮಾತನಾಡುತ್ತ  ಇದರಲ್ಲಿ  ನಾನು ನೆಗೆಟಿವ್ ಪಾತ್ರ ಮಾಡಿದ್ದೇನೆ, ಹರಿ ಈ ಸಿನಿಮಾ ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ, ಇದೊಂದು ಬ್ರಿಡ್ಜ್ ಸಿನಿಮಾ. ನಾಲ್ಕು ವೇನಲ್ಲಿ ಸಾಗುವ ಚಿತ್ರದ ಕಥೆ ಕ್ಲೈಮ್ಯಾಕ್ಸ್ ನಲ್ಲಿ ಒಂದೆಡೆ ಸೇರುತ್ತದೆ, ಮೊಬೈಲ್‌ಹೆಚ್ಚು ಬಳಸುವುದರಿಂದ ಏನೇನೆಲ್ಲ ಆಗುತ್ತದೆ, ಅದರ ಅನುಕೂಲ, ಅನಾನುಕೂಲತೆಗಳೇನು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇನೆ ಎಂದು ಹೇಳಿದರು,

   ನಿರ್ಮಾಪಕ ಯತಿರಾಜ್ ಮಾತನಾಡುತ್ತ ಇದು ನಮ್ಮ ನಿರ್ಮಾಣದ ಮೊದಲ ಚಿತ್ರ, ಎಲ್ಲರೂ ಪ್ರೋತ್ಸಾಹಿಸಿ ಎಂದು ಹೇಳಿದರುನಂತರ ದಡ್ಡ ಪ್ರವೀಣ್ ಖ್ಯಾತಿಯ  ರಂಜಿತ್ ಕಾಸರಗೋಡುವರ್ಧನ್ ತೀರ್ಥಳ್ಳಿ, ರಾನ್ವಿ ಶೇಖರ್ ತಂತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು, ಬೆಂಗಳೂರು, ಮೈಸೂರು, ಮಂಗಳೂರು, ನಂಜನಗೂಡು, ಶ್ರೀರಂಗಪಟ್ಟಣ, ಹೆಚ್.ಡಿ.ಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ, ಮಗ್ಗಿಪುಸ್ತಕ  ಚಿತ್ರದಲ್ಲಿ ಒಟ್ಟಿ 7 ಹಾಡುಗಳಿದ್ದು, 17 ಜನ ಸಿಂಗರ್ಸ್ ಹಾಡಿದ್ದಾರೆ.

ಎಸ್.ಎಸ್. ನಾಚಪ್ಪ ಅವರ ಸಂಗೀತ ಸಂಯೋಜನೆಯಿದೆ. ಡಾ. ವಿಷ್ಣುವರ್ಧನ್ ಅಭಿನಯದ ಅಪ್ಪಾಜಿ, ಜಮೀನ್ದರ‍್ರು ಚಿತ್ರಗಳಿಗೆ ಸಂಗೀತ ನೀಡಿದ್ದ ಎಂ.ಎಂ.ಕೀರವಾಣಿ ಬಹಳ ದಿನಗಳ ನಂತರ  ಈ ಚಿತ್ರದ ಹಾಡೊಂದಕ್ಕೆ ದನಿಯಾಗಿರುವುದು  ವಿಶೇಷ. ಉಳಿದಂತೆ  ಕನ್ನಡ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್,ಕಂಭದ ರಂಗಯ್ಯ, ನವೀನ್ ಸಜ್ಜು, ಇಂದು ನಾಗರಾಜ್, ಗುರುರಾಜ್ ಹೊಸಕೋಟೆ, ಸೈಂಧವಿ, ವೈಕಂ ವಿಜಯಲಕ್ಷ್ಮಿ ಹಾಗೂ ರವೀಂದ್ರ ಸೊರಗಾವಿ ಸೇರಿದಂತೆ   17 ಜನ   ಈ ಚಿತ್ರದಲ್ಲಿ ಹಾಡಿರುವುದು ಮತ್ತೊಂದು ವಿಶೇಷ.

   ಫೆಬ್ರವರಿ  13ರಂದು ಮಗ್ಗಿ ಪುಸ್ತಕ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದ್ದು,   ಎಂ.ಪಿ. ಫಿಲಂಸ್ ಮೂಲಕ ಕೆ. ಮುನೀಂದ್ರ ಅವರು ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆಸರ್ಕಾರಿ ಹಿರಿಯ ಪಾಠಶಾಲೆ ಖ್ಯಾತಿಯ  ರಂಜನ್ ಕಾಸರಗೋಡು, ರಾನ್ವಿ ಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ  ಶೋಭರಾಜ್, ಮೇಘನಾ, ಮೈಸೂರು ರಮಾನಂದ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಾಘು ರಮನಕೊಪ್ಪ ಇನ್ನಿತರರು ನಟಿಸಿದ್ದಾರೆ. ಈ  ಚಿತ್ರಕ್ಕೆ ನಂದಕುಮಾರ್ ಅವರ ಛಾಯಾಗ್ರಹಣ, ಶಿವಕುಮಾರ್ ಅವರ  ಸಂಕಲನವಿದೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ