Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕೃಷ್ಣಮೂರ್ತಿ, ಕಾರ್ಯದರ್ಶಿಯಾಗಿ ಮಂಜುನಾಥ ಆಯ್ಕೆ

Advertisement
ಚಂದ್ರವಳ್ಳಿ ನ್ಯೂಸ್,ದೊಡ್ಡಬಳ್ಳಾಪುರ:
ಲಯನ್ಸ್ ಕ್ಲಬ್ ಆಫ್ ಕಂಟನಕುಂಟೆ ಕಿಂಗ್ಸ್ ನೂತನ ಅಧ್ಯಕ್ಷರಾಗಿ ಕೆ. ಎಂ. ಕೃಷ್ಣಮೂರ್ತಿ ಹಾಗೂ ಕಾರ್ಯದರ್ಶಿಯಾಗಿ ಎಂ ಸಿ. ಮಂಜುನಾಥ್ ಆಯ್ಕೆಯಾಗಿದ್ದಾರೆ.


    ಇತ್ತೀಚೆಗೆ ನಗರದ ಲಯನ್ಸ್ ಚಾರಿಟಬಲ್ ಟ್ರಸ್ಟ್ ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ರಾಜ್ಯಪಾಲರಾದ ಎಲ್. ಎಂ. ನಾರಾಯಣ ಸ್ವಾಮಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಪ್ರಮಾಣ ವಚನ ಬೋದಿಸಿದರು. ನಂತರ ಅವರು ಮಾತನಾಡಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ವಿವಿಧ ಉದ್ಯೋಗದಲ್ಲಿ ತೊಡಗಿಕೊಂಡಿದ್ದರೂ ಸಹ ಸೇವೆ ಮಾಡಬೇಕೆಂಬ ಅಭಿಲಾಷೆಯಿಂದ ಲಯನ್ಸ್ ಕ್ಲಬ್ ಗೆ ಬರುತ್ತಿರುವುದು ಸಂತಸದ ವಿಚಾರ. ಲಯನ್ಸ್ ದ್ಯೇಯ, ಸೇವಾ ಮನೋಭಾವ ಅರಿತು ಉತ್ತಮ ಸೇವೆ ಸಲ್ಲಿಸಬೇಕೆಂದು ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

     ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೃಷ್ಣಮೂರ್ತಿ ಮಾತನಾಡಿ ನಾನು ಕೃಷಿ ಕುಟುಂಬದಿಂದ ಬಂದವನು. ಮೇಲಾಗಿ ನಾನೊಬ್ಬ ರಂಗಭೂಮಿ ಕಲಾವಿದ. ರಾಜಕೀಯ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ವಿವಿಧ ಹುದ್ದೆಗಳನ್ನು ಹೊಂದಿದ್ದರೂ ಸಹ ಲಯನ್ಸ್ ಕ್ಲಬ್ ನಲ್ಲಿ ಸೇವೆ ಸಲ್ಲಿಸಬೇಕೆಂಬ ಮಹದಾಸೆಯನ್ನು ಹೊಂದಿದ್ದೇನೆ. ನನಗೆ ಸಿಕ್ಕಿರುವ ಅವಕಾಶದಲ್ಲಿ ಎಲ್ಲರನ್ನು ಒಗ್ಗೂಡಿಸಿ ಉತ್ತಮ ಸೇವಾಕಾರ್ಯ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಕಾರ್ಯದರ್ಶಿ ಎಂ. ಸಿ. ಮಂಜುನಾಥ್ ಮಾತನಾಡಿ ನಾನು ಶಿಕ್ಷಣ ಕ್ಷೇತ್ರದಲ್ಲಿ ಉಪನ್ಯಾಸಕನಾಗಿ, ಪ್ರಾಮ್ಶು ಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ಜನಪರ ಕೆಲಸ ಮಾಡುವ ಇಚ್ಛೆಯಿಂದ ಲಯನ್ಸ್ ಕ್ಲಬ್ ಗೆ ಬಂದಿದ್ದೇನೆ. ನನಗೆ ನೀಡಿರುವ ಜವಾಬ್ದಾರಿಯನ್ನು ಎಲ್ಲರ ಮಾರ್ಗದರ್ಶನದ ಮೇರೆಗೆ ಸೇವೆ ಸಲ್ಲಿಸುವುದಾಗಿ ಹೇಳಿದರು.

      ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಕೆ. ಎಂ. ಕೃಷ್ಣಮೂರ್ತಿ, ಕಾರ್ಯದರ್ಶಿ ಎಂ. ಸಿ. ಮಂಜುನಾಥ್, ಖಜಾಂಚಿ ಗೋಪಾಲಕೃಷ್ಣ, ಜಂಟಿ ಕಾರ್ಯದರ್ಶಿ ಡಿ ಕೆಂಪಣ್ಣ, ಸೇವಾಕಮಿಟಿ ಚೇರ್ಮನ್ ಮುತ್ತರಾಯಪ್ಪ, ಪ್ರೋಗ್ರಾಮ್ ಕಮಿಟಿ ಚೇರ್ಮನ್ ಎನ್. ವಿ. ಶ್ರೀನಿವಾಸ್ ರೆಡ್ಡಿ, ಹಿರಿಯ ಉಪಾಧ್ಯಕ್ಷ ರಾಜಗೋಪಾಲ್ ಸೇರಿದಂತೆ 24ಮಂದಿ ನಿರ್ದೇಶಕರನ್ನು ಅಭಿನಂದಿಸಲಾಯಿತು.

     ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರೂ ಹಾಗೂ ಲಯನ್ಸ್ ಕ್ಲಬ್ ಆಫ್ ಕಂಟನಕುಂಟೆ ಕಿಂಗ್ಸ್ ಸ್ಥಾಪನೆಗೆ ಕಾರಣರಾದ ಮಂಗಳಗೌರಮ್ಮಪರ್ವತಯ್ಯ ಅಧ್ಯಕ್ಷತೆ ವಹಿಸಿದ್ದರು. ಕಂಟನಕುಂಟೆ ಕಿಂಗ್ಸ್ ಸ್ಥಾಪನೆಗೆ ಪ್ರಮುಖವಾಗಿ ಶ್ರಮಿಸಿದ ಲಯನ್ಸ್ ಕಾರ್ಯದರ್ಶಿ ಕೆ. ಪಿ. ಲಕ್ಷ್ಮೀನಾರಾಯಣ, ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಬಿ. ಎಸ್. ರಾಜಶೇಖರಯ್ಯ, ಹೆಚ್. ಕೆ. ಗಿರಿದರ್, ರೀಜನಲ್ ಚೇರ್ ಪರ್ಸನ್ ಎಂ. ಪಿ. ಸಿ. ವೆಂಕಟೇಶ್, ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಜಿ. ಎಲ್. ಪ್ರಸನ್ ಕುಮಾರ್, ಸಿ. ಎಂ. ರಾಜಶೇಖರಯ್ಯ, ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ. ಎಂ. ಹನುಮಂತರಾಯಪ್ಪ, ಖಜಾಂಚಿ ಕೆ. ಜಿ. ಗೋಪಾಲ್,ಲಯನ್ಸ್ ಕ್ಲಬ್‌ ಆಫ್ ಕಂಟನಕುಂಟೆ ಕಿಂಗ್ಸ್ ಗೈಡೆನ್ಸ್ ಎಸ್ ಪಿ ವೈಡುರ್ಯ  ಹಾಗೂ ಲಯನ್ಸ್ ಕ್ಲಬ್ ನ ವಿವಿಧ ವಲಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ