Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಂಬಿಯಾ ಬನಾದ ಮ್ಯಾಗ ಚಿತ್ರ ಏಪ್ರಿಲ್ ತಿಂಗಳ 4 ರಂದು ಬಿಡುಗಡೆ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವರನಟ ಡಾ.ರಾಜಕುಮಾರ್ ಪುತ್ರಿ ಲಕ್ಷ್ಮಿ ಹಾಗೂ ಗೋವಿಂದರಾಜು ಪುತ್ರ ಷಣ್ಮುಖ ಗೋವಿಂದರಾಜ್ ಅಭಿನಯದ ನಿಂಬಿಯಾ ಬನಾದ ಮ್ಯಾಗ ಚಿತ್ರದ ಪಾರ್ಟ್-1 ಏಪ್ರಿಲ್ ತಿಂಗಳ 4 ರಂದು ಬಿಡುಗಡೆ ಆಗಲಿದೆ ಎಂದು ನಾಟಕ ನಟ ಷಣ್ಮುಖ ಗೋವಿಂದರಾಜ್ ತಿಳಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.


ನಿಂಬಿಯಾ ಬನಾದ ಮ್ಯಾಗಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಏಪ್ರಿಲ್ 4 ರಂದು ಚಿತ್ರ ಬಿಡುಗಡೆಯಾಗಲಿದೆ. ನಿಂಬಿಯಾ ಬನಾದ ಮ್ಯಾಗ ಚಿತ್ರದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾದ ಶೇಕಡ 70 ಭಾಗ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ ಎಂದು ಅವರು ತಿಳಿಸಿದರು.


ನಿಂಬಿಯಾ ಬನಾದ ಮ್ಯಾಗ ಸಿನಿಮಾಗೆ ಅಶೋಕ್‌ಕಡಬ ನಿರ್ದೇಶನ ಮಾಡಿದ್ದಾರೆ. ನಾಯಕ ನಟರಾಗಿ ಷಣ್ಮುಖ ಗೋವಿಂದರಾಜ್ ಅಭಿನಯದ ಚೊಚ್ಚಲ ಚಿತ್ರ 'ನಿಂಬಿಯಾ ಬನಾದ ಮ್ಯಾಗ'. ಈ ಸಿನಿಮಾಗೆ ನಿರ್ದೇಶಕ ಕಡಬ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾಕ್ಕೆ 'ನಿಂಬಿಯಾ ಬನಾದ ಮ್ಯಾಗ' ಹೆಸರು ವಿಭಿನ್ನವಾಗಿರಲೆಂದು ಆ ಹೆಸರಿಡಲಾಗಿದೆ ಎಂದರು.

'ಸತ್ಯಂ' ಎಂಬ ಸಿನಿಮಾವನ್ನು ಅಶೋಕ್‌ಕಡಬ ನಿರ್ದೇಶನ ಮಾಡಿದ್ದು, ಅದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಎನ್ನಲಾಗಿದೆ. ಅದು ತೆರೆಗೆ ಬರುವ ಮುನ್ನವೇ ಈಗ 'ನಿಂಬಿಯಾ ಬನಾದ ಮ್ಯಾಗ' ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ.
ಚಿತ್ರದ ನಿರ್ದೇಶಕ ಅಶೋಕ್ ಕಡಬ ಅವರು ಮಾತನಾಡಿ ಕಥೆ ತುಂಬಾ ಚನ್ನಾಗಿದೆ. ಈ ಕಥೆಯನ್ನು ರಾಜ್ ಕುಟುಂಬದ ಎಲ್ಲರೂ ಮೆಚ್ಚಿಕೊಂಡೇ ಒಪ್ಪಿಗೆ ಸೂಚಿಸಿದ್ದಾರೆ. 5 ವರ್ಷದನಿದ್ದಾಗ ತಾಯಿಂದ ದೂರಾಗುವ ಪುತ್ರ 25 ವರ್ಷಗಳ ನಂತರ ಅಮ್ಮನ ಮಡಿಲು ಸೇರುತ್ತಾನೆ. ಇದರ ಮಧ್ಯ ಸಾಗುವ ಕಥೆ ಅದ್ಭುತವಾಗಿದೆ ಎಂದು ಅವರು ತಿಳಿಸಿದರು.


ಚಿತ್ರ ನಿರ್ಮಾಪಕ ಹಾಗೂ ಮಾಜಿ ನಗರಸಭಾಧ್ಯಕ್ಷ, ಜೆಡಿಎಸ್ ಮುಖಂಡ ಬಿ.ಕಾಂತರಾಜ್ ಮಾತನಾಡಿ, ಚಿತ್ರದುರ್ಗಕ್ಕೂ ಡಾ.ರಾಜ್ ಕುಟುಂಬಕ್ಕೆ ಬಿಡಿಸಲಾಗದ ನಂಟು. ಡಾ.ರಾಜ್ ಮೊಮ್ಮಗ ಷಣ್ಮುಖ ಈ ಕಥೆ ಮತ್ತು ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.

ಅಮ್ಮ- ಮಗನ ಭಾವನಾತ್ಮಕ ಕಥಾಹಂದರವನ್ನು ಹೊಂದಿರುವ ಈ ಸಿನಿಮಾದ ಕಥೆಯು ಮಲೆನಾಡು ಭಾಗದಲ್ಲಿ ನಡೆಯುತ್ತದೆ. ಎರಡು ಹಂತಗಳಲ್ಲಿ ಬೆಂಗಳೂರು, ಉಡುಪಿ ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ.  ಹಿರಿಯ ನಟಿ ಭವ್ಯಾ, ನಟ ರಾಮಕೃಷ್ಣ, ಉಮೇಶ್, ಶಶಿಧರ ಕೋಟೆ ಮುಂತಾದವರು ಬಣ್ಣ ಹಚ್ಚಿರುವ ಈ ಸಿನಿಮಾದಲ್ಲಿ ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ಕೂಡ ನಟಿಸಿದ್ದಾರೆ. ನಾಯಕ ನಟ ಷಣ್ಮುಖ ಗೋವಿಂದ್ ರಾಜ್, ತನುಶ್ರೀ, ಸುನದ್ ರಾಜ್, ಸಂಗೀತಾ, ಪದ್ಮಾ ವಾಸಂತಿ, ರಾಮಕೃಷ್ಣ, ಮುಗು ಸುರೇಶ್, ಸಂದೀಪ್ ಮಲಾನಿ, ತ್ರಿಷಾ ಮತ್ತಿತರರು ಅಭಿನಯಿಸಿದ್ದಾರೆ ಎಂದು ಅವರು ತಿಳಿಸಿದರು.
ನಿಂಬಿಯಾ ಬನಾದ ಮ್ಯಾಗ
ಸಿನಿಮಾವನ್ನು ಎಮ್‌ಜಿಪಿಎಕ್ಸ್ ಎಂಟರ್‌ಪ್ರೈಸಸ್ ಬ್ಯಾನರ್‌ಅಡಿಯಲ್ಲಿ ವಿ ಮಾದೇಶ್ ನಿರ್ಮಿಸಿದ್ದಾರೆ ಎಂದು ಅವರು ತಿಳಿಸಿದರು.

ಪ್ರೇಕ್ಷಕರು ಹೊಸಬರ ಚಿತ್ರ ನೋಡಿ ಆಶೀರ್ವಾದಿಸಬೇಕು, ಕನ್ನಡ ಚಿತ್ರರಂಗ ಗಟ್ಟಿಯಾಗಿ ನಿಲ್ಲಬೇಕು ಎಂದು ತಿಳಿಸಿದರು.
ಸಂಗೀತ : ಆರೋನ್ ಕಾರ್ತಿ
& ಪ್ರವೀಣ್ ಶ್ರೀನಿ, ಛಾಯಾಗ್ರಹಣ: ಸಿದ್ದು ಕಂಚನಹಳ್ಳಿ, ಹಿನ್ನಲೆ ಸಂಗೀತ : ಪಳನಿ ಡಿ. ಸೇನಾಪತಿ, ನೃತ್ಯ:ಮದನ್ ಹರಿಣಿ ತಾಂತ್ರಿಕ ವರ್ಗದಲ್ಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ವಿ.ಮಾದೇಶ್, ಸುನಾದ್ ರಾಜ್ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ