Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಬೊಮ್ಮಾಯಿ

Advertisement
ಚಂದ್ರವಳ್ಳಿ ನ್ಯೂಸ್, ಹಾವೇರಿ:
ಬೆಡ್ತಿ ವರದಾ ನದಿ ಜೋಡಣೆಗೆ ತಪ್ಪು ಕಲ್ಪನೆಯಿಂದ ವಿರೋಧ ಮಾಡಿವುದು ಬೇಡ
, ನೀರಿನ ಸದ್ಬಳಕೆಗೆ ಮಾಡಿರುವ ಯೋಜನೆ ಪರಿಷ್ಕರಣೆ ಆಗಿದೆ. ಶೇ 10% ಮಾತ್ರ ನೀರನ್ನು ಬಳಸಿಕೊಳ್ಳಲು ಯೋಜಿಸಿದ್ದು, ಒಟ್ಟು ನೀರಿನ ಹರಿವಿಗೆ ಯಾವುದೇ ತೊಂದರೆಯಿಲ್ಲ, ದಯವಿಟ್ಟು ಯೋಜನೆಗೆ ಸಹಕಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಪರಮ ಪೂಜ್ಯ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಬೆಡ್ತಿ - ವರದಾ ಕುರಿತು ಚರ್ಚೆ ಮಾಡಿದ್ದಾರೆ. ಬೆಡ್ತಿ ಯೋಜನೆಗೆ ಆಕ್ಷೇಪ ವ್ಯಕ್ರ ಪಡಿಸಿದ್ದಾರೆ. ನಾವು  ಆ ಭಾಗದ ಜನರ ಗುರುಗಳ ಭಾವನೆ ಗೌರವಿಸುತ್ತೇವೆ.  ತಪ್ಪು ಕಲ್ಪನೆ ಮೇಲೆ ವಿರೋಧ ಮಾಡುವುದು ಬೇಡ ಅನ್ನುವ ಮನವಿಯನ್ನು ಆದರ ಪೂರಕವಾಗಿ ಮಾಡುತ್ತೇನೆ. ಈ ಯೋಜನೆ ಸುಮಾರು 30 ವರ್ಷದಿಂದ ಇದೆ. ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಆಥಾರಿಟಿ ಯಿಂದ ಬಂದಿರುವ ಯೋಜನೆ. ದಕ್ಷಿಣ ಭಾರತದ ಪ್ರಮುಖ ಮೂರು ಯೋಜನೆಗಳಲ್ಲಿ ಇದು ಒಂದು. ಈಗಿರುವ ರಾಜಕಾರಣಿಗಳು ಆಗ ಯಾರೂ ರಾಜಕಾರಣದಲ್ಲಿ ಇರಲೇ ಇಲ್ಲ ಎಂದು ಹೇಳಿದರು.

ಸದ್ಬಳಕೆಗೆ ಯೋಜನೆ-
ಇದು ನೀರಿನ ಸದ್ಬಳಕೆಗೆ ಮಾಡಿರುವ ಯೋಜನೆ. ಈಗ ಯೋಜನೆ ಪರಿಷ್ಕರಿಣೆ ಆಗಿದೆ. ಸಣ್ಣ ಬ್ಯಾರೇಜ್ ಮಾಡಿ ಲಿಪ್ಟ್ ಮಾಡಲಾಗುತ್ತದೆ‌ಯಾವುದೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುವುದಿಲ್ಲ. ನದಿಯ ಕೇವಲ 10 % ರಷ್ಟು ನೀರು  ಮಾತ್ರ ತೆಗೆದುಕೊಳ್ಳಬೇಕು ಅನ್ನುವ ಚಿಂತನೆ ಇದೆ.  ಹೀಗಾಗಿ ನದಿ ಪಾತ್ರದ ನೀ ರಿನ ಹರಿವಿಗೆ ಯಾವುದೇ ತೊಂದರೆ ಇಲ್ಲ. ಈ ಯೋಜನೆಗೆ ಡಿ ಪಿ ಆರ್ ಆಗಬೇಕು ಪರಿಸರದ ಪರಿಣಾಮಗಳ ಅಧ್ಯಯನ ಆಗಬೇಕು. ಅದರ ಸಾಧಕ ಬಾಧಕ ನೋಡುತ್ತಾರೆ. ಇದೆಲ್ಲ ಪ್ರಕ್ರಿಯೆ ಇದೆ. 


ದಯವಿಟ್ಟು ಸಹಕಾರ ಮಾಡಬೇಕು. ಯೋಜನೆ ಸಂಪೂರ್ಣ ವಿವರ ಬಂದಾಗ ಪರಿಣಿತರು ತೀರ್ಮಾನ ಮಾಡುತ್ತಾರೆ. ನೀರಿನ ಸಂಪತ್ತು ಸದ್ಬಳಕೆ ಆಗಬೇಕು. ನೀರೇ ಇಲ್ಲದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ  ಇದೆ. ನಾವು ಮಳೆಗಾಲದಲ್ಲಿ ನೀರು ಹಿಡಿದಿಟ್ಟು ಬೇಸಿಗೆಯಲ್ಲಿ ನೀರು ಉಪಯೋಗಿಸ್ತೇವೆ‌ಬರ ಪ್ರದೇಶಕ್ಕೆ ಈ ನೀರು ಅನುಕೂಲ ಅಗುತ್ತದೆ. ಒಬ್ಬರಿಗೊಬ್ಬರು ಸಹಕಾರ ಕೊಡಬೇಕು. ಯೋಜನೆಯಿಂದ ಯಾವುದೇ ತೊಂದರೆ ಇಲ್ಲ. ಇದರಿಂದ ಬರ ಪೀಡಿತ ಹಾವೇರಿ ಮತ್ತು ಇತರ ಜಿಲ್ಲೆಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ