Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿ ಈಜ್ ಮೈ ಲವ್ - ಚಿತ್ರೀಕರಣ ಆರಂಭ

Advertisement
ಚಂದ್ರವಳ್ಳಿ ನ್ಯೂಸ್,  ಮೈಸೂರು :
ಕ್ರಿಯೇಟಿವ್ ಕಾನ್ಸೆಪ್ಟ್ಸ್ ಬೆಂಗಳೂರು ಬ್ಯಾನರಡಿ  ಮೈಸೂರಿನ ಅಗ್ರಹಾರದ ಶ್ರೀ ಕೃಷ್ಣ
ದೇವಸ್ಥಾನದಲ್ಲಿ ಶಿ ಇಜ್(ಈಸ್) ಮೈ ಲವ್  ಚಲನಚಿತ್ರದ ಚಿತ್ರೀಕರಣ ಮುಹೂರ್ತ ನೆರವೇರಿತು. 

ಅತಿಥಿಗಳಾಗಿ ಆಗಮಿಸಿದ್ದ  ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್ ವತ್ಸ ಅವರು ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿ ಚಿತ್ರ ಅದ್ಧೂರಿ ಯಶಸ್ಸು ಕಾಣಲೆಂದು ಶುಭ ಹಾರೈಸಿದರು.


ಚಲನಚಿತ್ರ ನಿರ್ಮಾಪಕ  ಎಂ ಡಿ ಪಾರ್ಥಸಾರಥಿ, ನಿರ್ಮಾಪಕ, ನಿರ್ದೇಶಕ ಲೋಕೇಶ್ ವಿದ್ಯಾಧರ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.


ಚಿತ್ರದಲ್ಲಿ ಮಾತುಕತೆಗಳೆಲ್ಲ ಆಂಗೀಕ, ಸಂಜ್ಞೆಯ ಮೂಲಕವೇ ಸಾಗುವ ಮೂಕಿ ಚಿತ್ರ. ಈ ಚಿತ್ರದಲ್ಲಿ ನಾಯಕ  ಕಿವುಡ ಹಾಗೂ ಮೂಗ. ಆತ ಒಂದು ಹುಡುಗಿನ ಪ್ರೀತಿಸುತ್ತಾನೆ . ಮಾತು ಬಾರದ ಹಾಗೂ ಕಿವಿ ಕೇಳದ ಹುಡುಗ ಹೇಗೆ ಪ್ರೀತಿ ಮಾಡ್ತಾನೆ. ಆ ಪ್ರೀತಿನ ಹೇಗೆ ವ್ಯಕ್ತಪಡಿಸುತ್ತಾನೆ. ಹಾಗೆ ಅಲ್ಲಿ ಬರುವಂತಹ ಸನ್ನಿವೇಶ ಸಂದರ್ಭಗಳನ್ನು ಎದುರಿಸಿ ಕೊನೆಗೆ ಅವಳನ್ನು ಹೇಗೆ ಮದುವೆಯಾಗುತ್ತಾನೆ ಅನ್ನೋದು ಚಿತ್ರದಲ್ಲಿದೆ.

ಮೈಸೂರಿನ ಸುತ್ತ ಮುತ್ತ ಮೂವತ್ತು ದಿನಗಳ ಕಾಲ ಸತತ ಚಿತ್ರೀಕರಣ ನಡೆಯಲಿದೆ. ಆದಷ್ಟು ಬೇಗ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ನಿರ್ದೇಶಕ , ನಿರ್ಮಾಪಕ  ಜನಾರ್ಧನ ರಾಜು ಹೇಳಿದರು.

ತಾರಾಗಣದಲ್ಲಿ ನವೀನ, ಅಶ್ರೀತಾ, ವಾಸ್ತವ, ಅನುರಾಧ, ಅಶೀನಾ, ರಾಜಕುಮಾರ್, ಮುತ್ತುರಾಜ್, ಮಮತಾ, ಲೋಕೇಶ ವಿದ್ಯಾಧರ, ಪ್ರದೀಪ, ತನ್ಯಾ, ವೆಂಕಟೇಶ, ಮನೀಷಾ, ಮನಿಕಂಠ, ಕೆ ಸಾಯಿ ಚೈತನ್ಯಕುಮಾರ್, ಕಿರಣ್ ಮೊದಲಾವರಿದ್ದಾರೆ. ತಾಂತ್ರಿಕವರ್ಗದಲ್ಲಿ   ಸಂಗೀತ ಸಂದೀಪ,

ಪ್ರಸಾಧನ ಗೋಪಿ, ವಸ್ತ್ರಾಲಂಕಾರ ರಾಮ್‌ಬಾಬು, ಕಲಾನಿರ್ದೇಶನ ಸಾಯಿ ಕಲ್ಯಾಣಕುಮಾರ್ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹನಿರ್ದೇಶನ ಪ್ರಶಾಂತ ರಾಯ್, ಪ್ರೊಡಕ್ಷನ್ ಮ್ಯಾನೇಜರ್ ಯುವರಾಜ ಇದ್ದು ಜನಾರ್ಧನ ರಾಜು ಚಿತ್ರಕಥೆ,ಸಂಭಾಷಣೆ, ಛಾಯಾಗ್ರಹಣ, ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿದ್ದಾರೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ