Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ಜ.24ಕ್ಕೆ ಶಿವಯೋಗಿ ಶ್ರೀಸಿದ್ದರಾಮೇಶ್ವರ ಚಿತ್ರ ಬಿಡುಗಡೆ

Advertisement
ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಓಂಕಾರ ಮೂವೀಸ್ ಬೆಂಗಳೂರ ಅವರ ಸುಜಾತ ರಾಜ್ ಕುಮಾರ್ ಅರ್ಪಿಸುವ ಪುರುಷೋತ್ತಮ್ ಓಂಕಾರ್ ಸ್ವಾಮಿಯವರ ದಕ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ "ಶಿವಯೋಗಿ ಶ್ರೀ ಸಿದ್ದರಾಮೇಶ್ವರ" ಭಕ್ತಿಪ್ರಧಾನ ಕನ್ನಡ ಚಲನಚಿತ್ರದ ಪತ್ರಿಕಾಗೋಷ್ಟಿ ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ  ಜರುಗಿತು.       ಈ ಚಿತ್ರದಲ್ಲಿ ನಾಯಕ ನಟರಾಗಿ ಉತ್ತರ ಕರ್ನಾಟಕದ ಬೈಲಹೊಂಗಲ ತಾಲೂಕಿನ ಯುವ ಪ್ರತಿಭೆಯಾದ ರಾವಣ ಕತ್ತಿಯವರು ಸಿದ್ದರಾಮೇಶ್ವರನಾಗಿ ಅಭಿನಯಿಸಿದ್ದಾರೆ.


ಮೊದಲ ಬಾರಿಗೆ  ಒಂದು ಪೌರಾಣಿಕ ಕಥೆಯನ್ನು ಈಗಿನ ಕಾಲದ ತಾಂತ್ರಿಕತೆಯೊಂದಿಗೆ ಸಿದ್ಧಪಡಿಸಲಾಗಿದ್ದು ಸಿದ್ದರಾಮೇಶ್ವರ ಪವಾಡಗಳೊಂದಿಗೆ ಮನರಂಜನೆಯನ್ನು  ಹೊಂದಿದೆ. ಈಗಿನ ಕಾಲದ ಜನರಿಗೆ ಶರಣರ ಸಂಗತಿಗಳನ್ನು ಮನರಂಜನಾತ್ಮಕವಾಗಿ ಮುಟ್ಟಿಸಲು ಎನ್.ಎಸ್ ರಾಜಕುಮಾರ್ ಅವರು ಚಿತ್ರಕ್ಕೆ ಬಂಡವಾಳವನ್ನು ಹೂಡಿಕೆ ಮಾಡಿದ್ದು ಹಾಗೂ ಸಹ ನಿರ್ಮಾಪಕರಾಗಿ.ಜೆ.ಕೆ. ಸುನಿಲ್ ಕುಮಾರ್  ಕೈಜೋಡಿಸಿದ್ದಾರೆ.

ಈ ಚಿತ್ರದಲ್ಲಿ ಎರಡು ಹಾಡುಗಳು ಹಾಗೂ ನಾಲ್ಕು ವಚನಗಳಿದ್ದು  ಚಿತ್ರಕ್ಕೆ ಸಂಗೀತ ಸಂಯೋಜನೆ  ರಾಜ್ ಭಾಸ್ಕರ್ ಮಾಡಿದ್ದಾರೆ.  ಛಾಯಾಗ್ರಹಣ ಗೌರಿ ವೆಂಕಟೇಶ್,ಚಿತ್ರದ ಎಡಿಟಿಂಗ್ ಕಲರ್ ಕರೆಕ್ಷನ್ ಹಾಗೂ ಗ್ರಾಫಿಕ್ಸ್ ಕೆಲಸವನ್ನು ಆರ್.ಅನಿಲ್ ಕುಮಾರ್ , ಪತ್ರಿಕಾಸಂಪರ್ಕ ಡಾ. ಪ್ರಭು ಗಂಜಿಹಾಳಡಾ.ವೀರೇಶ್ ಹಂಡಗಿ ಅವರದಿದೆ. ಮುಖ್ಯತಾರಾಗಣದಲ್ಲಿ ರಾವಣ ಕತ್ತಿ. ಗಣೇಶ್ ರಾವ್ ಕೇಸರಕರ್, ನಾಗೇಂದ್ರ ಅರಸು,ಬಸವರಾಜ್ ರಕ್ಷಾಗೌಡ ,ಅನ್ನಪೂರ್ಣ, ಪ್ರಮೀಳಾ ಸುಬ್ರಹ್ಮಣ್ಯ  ,ಬಾಲಕ ಸಿದ್ದರಾಮನಾಗಿ ಮಾ.ಸಮರ್ಥ, ಬಸವರಾಜ  ಮುಂತಾದವರು ಅಭಿನಯಿಸಿದ್ದಾರೆ.  .

     ಈ ಚಿತ್ರವು ಇದೆ ಜ. ೨೪ರಂದು  ರಾಜ್ಯಾದ್ಯಂತ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಪತ್ರಿಕಾ ಮಾಧ್ಯಮ ಹಾಗೂ ಪ್ರೇಕ್ಷಕ ಪ್ರಭುಗಳು ಚಲನಚಿತ್ರ ವೀಕ್ಷಿಸಿ ಪ್ರೋತ್ಸಾಹ ನೀಡಬೇಕೆಂದು  ನಿರ್ದೇಶಕ ಪುರು?ತ್ತಮ ಓಂಕಾರಸ್ವಾಮಿ ಹೇಳಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ