Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಗನ್ಮಾತೃತ್ವವನ್ನು ಜಗತ್ತಿಗೆ ಸಾಬೀತುಪಡಿಸಿದ್ದೇ ಷೋಡಶೀ ಪೂಜೆ: ಎಂ ಗೀತಾ ನಾಗರಾಜ್

Advertisement

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮಾತೆ ಶಾರದಾದೇವಿಯವರ ಜಗನ್ಮಾತೃತ್ವವನ್ನು ಶ್ರೀರಾಮಕೃಷ್ಣರ ಭಾವಪೂರ್ಣ ಪೂಜೆಯ ಮೂಲಕ ಸಾಬೀತುಪಡಿಸಿದ್ದೇ ಷೋಡಶೀ ಪೂಜೆ ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಉಪಾಧ್ಯಕ್ಷರಾದ ಎಂ ಗೀತಾ ನಾಗರಾಜ್ ತಿಳಿಸಿದರು.

ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ "ಫಲಹಾರಿಣೀ ಕಾಳೀಪೂಜೆ"ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಜನೆ ನಡೆಸಿಕೊಟ್ಟ ಅವರು "ಷೋಡಶೀ ಪೂಜೆ" ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. 

1873  ಜೂನ್ 5ನೇ ತಾರೀಖಿನ ವೈಶಾಖ ಬಹುಳ ಅಮಾವಾಸ್ಯೆಯ ಫಲಹಾರಿಣೀ ಕಾಳೀಪೂಜೆಯ ಪವಿತ್ರ ದಿನದಂದು  ಅವತಾರ ವರಿಷ್ಠ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಸಹಧರ್ಮಿಣಿ ಶ್ರೀಮಾತೆ ಶಾರದಾದೇವಿಯವರನ್ನು ತಮ್ಮ ಕೋಣೆಯಲ್ಲಿ ಕುಳ್ಳಿರಿಸಿ ಅವರಿಗೆ ಹದಿನಾರು ಅಂಗಗಳನ್ನು ಒಳಗೊಂಡ "ಷೋಡಶೋಪಚಾರ" ಪೂಜೆಯನ್ನು ಮಾಡಿದರೆ ಶ್ರೀಮಾತೆಯವರು ಜಗನ್ಮಾತೆಯಾಗಿ ಈ ವಿಶಿಷ್ಟ ಪೂಜೆಯನ್ನು ಸ್ವೀಕರಿಸಿದರು.

ಬಂಗಾಳದಲ್ಲಿ ಅತ್ಯಂತ ಪ್ರಸಿದ್ಧವಾದ ಪೂಜೆಯಾದ ಷೋಡಶೀಯು  ದೇವಿಯ ದಶಮಹಾವಿದ್ಯೆಯರಲ್ಲಿ  ಮೂರನೆಯವಳಾಗಿ ಹದಿನಾರರ ಹರೆಯದ, ಪರಮಲಾವಣ್ಯವತಿಯಾದ ಈಕೆಯ ಪೂಜೆಯ ಘಟನೆಯು  ಶ್ರೀರಾಮಕೃಷ್ಣ-ಶ್ರೀಶಾರದಾದೇವಿ ಇಬ್ಬರ ಜೀವನದಲ್ಲಿಯೂ ಅತ್ಯಂತ ಮಹತ್ವಪೂರ್ಣವಾದ ಘಟನೆ. ಶ್ರೀರಾಮಕೃಷ್ಣರು ತಮ್ಮ ಸಕಲ ಸಾಧನೆಗಳ ಫಲವನ್ನು ಶಾರದಾದೇವಿಯವರಿಗೆ ಸಮರ್ಪಿಸಿ ಶ್ರೀಮಾತೆಯವರ ದೇವಿತ್ವವನ್ನು ಜಗತ್ತಿನ ಜನರಿಗೆ ತಿಳಿಸಿದರು ಎಂದು ಷೋಡಶೀ ಪೂಜೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. 

ವಿಶೇಷ ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್, ಮಾಕಂಸ್ ಲಕ್ಷ್ಮೀ ಬಾಲಾಜೀ, ನೇತ್ರಾ ಮಂಜುನಾಥ, ಪ್ರೇಮಲೀಲಾ ರಾಮಣ್ಣ ಅವರಿಂದ ವಿಶೇಷ ದೇವಿ ಭಜನೆಗಳು, ಯತೀಶ್ ಎಂ ಸಿದ್ದಾಪುರ ಅವರಿಂದ ಭಜನೆ ಮತ್ತು "ಶ್ರೀಶಾರದಾದೇವಿ ಜೀವನಗಂಗಾ" ಗ್ರಂಥ ಪಾರಾಯಣ,ಕಿರು ಕಾಣಿಕೆಗಳ ಸಮರ್ಪಣೆ, ಮಂಗಳಾರತಿ,ಪ್ರಸಾದ ವಿನಿಯೋಗ ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ನಾಗರತ್ನಮ್ಮ, ಶೋಭಾ ರಮೇಶ್, ಪ್ರಮೀಳಾ ಜಗದೀಶ್, ಪ್ರೇಮಾ, ಅನುಸೂಯ, ರಾಘವೇಂದ್ರ, ಸುವರ್ಣ, ಸರಸ್ವತಿ , ಸೌಮ್ಯ, ಸುನೀತಾ ಭಾಗವಹಿಸಿದ್ದರು‌.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿಸಭೆಗ್ರಾಮಾಂತರ ಪೋಲಿಸರ ಕಾರ್ಯಾಚರಣೆ ಒಣಗಾಂಜ ವಶ ಆರೋಪಿ ಬಂಧನಬೆಳಗೆರೆ ಕೃಷ್ಣ ಶಾಸ್ತ್ರಿಗಳ 111ನೇ ಜಯಂತಿ: ಮೇ 22 ಮತ್ತು 23ರಂದು ದ್ವಿ ದಿನ ಆಚರಣೆಜಗನ್ಮಾತೃತ್ವವನ್ನು ಜಗತ್ತಿಗೆ ಸಾಬೀತುಪಡಿಸಿದ್ದೇ ಷೋಡಶೀ ಪೂಜೆ: ಎಂ ಗೀತಾ ನಾಗರಾಜ್ದೇವೇಗೌಡರು ಎಂಬುದೇ ಬಹುದೊಡ್ಡ ಗೌರವವನ್ನು ಕನ್ನಡಿಗರಿಗೆ ತಂದಿದೆಇದು ಕಾಂಗ್ರೆಸ್‌ನ ಸಾಧನಾ ಸಮಾವೇಶವಲ್ಲ, ಕನ್ನಡಿಗರಿಗೆ ಬಗೆದ ‘ದ್ರೋಹದ ಮಹಾಸಮಾವೇಶ’: ಆರ್. ಅಶೋಕ್ಹೊಸ ಬಸ್‌ಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದ ಸರ್ಕಾರಸ್ಮಾರ್ಟ್ ಮೀಟರ್ ಹಂಚಿಕೆಯಲ್ಲಿ ಮಹಾ ಅವಾಂತರ: ಆರ್. ಅಶೋಕ್ ಗಂಭೀರ ಆರೋಪರೋಮ್‌ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ: ಅನಿವಾಸಿ ಭಾರತೀಯರಿಗೆ ಧನ್ಯವಾದ ತಿಳಿಸಿದ ಪಿಎಂವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಪುನಶ್ಚೇತನಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಉನ್ನತ ಮಟ್ಟದ ಸಭೆ