ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ* :
ಪಠ್ಯ ಕೇಂದ್ರಿತ ಜ್ಞಾನದ ಜೊತೆಗೆ ಸಂವಹನ ಮತ್ತು ಮೃದು ಕೌಶಲಗಳು ಅಗತ್ಯ. ವ್ಯಕ್ತಿತ್ವ ನಿರ್ಮಾಣ ಮತ್ತು ಉದ್ಯೋಗಾವಕಾಶಗಳಿಗೆ ಅದು ಪೂರಕ ಎಂದು ಲಯನ್ಸ್‌ಮಲ್ಟಿಪಲ್‌ಕೌನ್ಸಿಲ್‌ಮಾಜಿ ಅಧ್ಯಕ್ಷ ಡಾ.ಎಸ್.ನಾಗರಾಜರಾವ್‌ಹೇಳಿದರು.
ಇಲ್ಲಿನ ಲಯನ್ಸ್‌ಕ್ಲಬ್‌ಆಫ್‌ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್, ಡಾ.ರಾವ್ಸ್‌ಎಕ್ಸೆಲ್‌ಲೀಡರ್‌ಶಿಪ್‌ಅಕಾಡೆಮಿ ಸಹಯೋಗದಲ್ಲಿ ಆರ್‌ಎಲ್‌ಜೆಐಟಿಯಲ್ಲಿ ಬುಧವಾರ ಸಂಜೆ ನಡೆದ ಶಿಕ್ಷಕರ 2 ದಿನಗಳ ಮೃದು ಕೌಶಲ(ಸಾಫ್ಟ್‌ಸ್ಕಿಲ್ಸ್) ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಫ್ಟ್ ಸ್ಕಿಲ್ಸ್‌ವಿಚಾರದಲ್ಲಿ ಜಾಗತಿಕವಾಗಿ ಮಹತ್ವದ ಪ್ರಯೋಗಗಳು ನಡೆಯುತ್ತಿವೆ. ಔದ್ಯೋಗಿಕ ವಲಯದಲ್ಲಿ ಇವುಗಳ ನಿರೀಕ್ಷೆ ಹೆಚ್ಚಿದೆ. ಪ್ರತಿಯೊಬ್ಬ ವ್ಯಕ್ತಿಯೂ ವಿದ್ಯಾಭ್ಯಾಸದ ಬಳಿಕ ಉದ್ಯೋಗವನ್ನು ಪಡೆಯುವ ಹಂತದಲ್ಲಿ ಆತನು ಪಡೆದ ಅಂಕಗಳಿಗಿಂತ ಹೆಚ್ಚಿನ ಮಹತ್ವ ಆತನಲ್ಲಿರುವ ನಡವಳಿ, ಸಮಯಪ್ರಜ್ಞೆ, ಸಮಸ್ಯೆ ನಿಗ್ರಹ ಸಾಮರ್ಥ್ಯ ಸೇರಿದಂತೆ ಮೃದು ಕೌಶಲಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದರು.
ಲಯನ್ಸ್‌ಜಿಲ್ಲಾ ನಿಯೋಜಿತ ಮೊದಲ ಉಪಪಾಲಕರಾದ ಎ.ವಿಜಯಕುಮಾರ್‌ಮಾತನಾಡಿ, ಸಮಯ, ಸ್ಥಳ ಮತ್ತು ಹೊಣೆಗಾರಿಕೆಯ ಪ್ರಜ್ಞಾಪೂರ್ವಕ ನಿರ್ವಹಣೆಯನ್ನು ಬಲ್ಲ ವ್ಯಕ್ತಿ ಸಾಧಕನಾಗಿ ಮುಂದುವರೆಯಲು ಸಾಧ್ಯ. ಅವಕಾಶಗಳ ಸದ್ಭಳಕೆ, ಸಾಮಾಜಿಕ ಅವಲೋಕನ, ವ್ಯಕ್ತಿಗತ ನಿರ್ವಹಣಾ ಸಾಮರ್ಥ್ಯಗಳನ್ನು ರೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ 2 ದಿನಗಳ ಕಾಲ ಸುಮಾರು 32 ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ದೊರೆತಿದೆ ಎಂದರು.
ಶ್ರೀ ದೇವರಾಜ್‌ಅರಸ್‌ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಮೃದು ಕೌಶಲ ತರಬೇತಿ ಅಕಾಡೆಮಿಕ್‌ನ ಭಾಗವಾಗಬೇಕು. ವಿದ್ಯಾರ್ಥಿಗಳಿಗೆ ಸವಾಲುಗಳನ್ನು ಎದುರಿಸುವ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ವೃದ್ದಿಗೆ ಮಾರ್ಗದರ್ಶನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ಪೂರಕ ಪಾತ್ರ ನಿರ್ವಹಿಸುತ್ತವೆ ಎಂದು ತಿಳಿಸಿದರು.
ಲಯನ್ಸ್‌ಕ್ಲಬ್‌ಆಫ್‌ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್‌ಜಿಲ್ಲಾ ಜಾಗತಿಕ ಸೇವಾ ತಂಡದ ಸಂಚಾಲಕ ರವಿಚಂದ್ರನ್, ಜಿಲ್ಲಾ ಸದಸ್ಯತ್ವ ಸಮಿತಿ ಸಂಚಾಲಕ ಹಾಗೂ ಸಾಫ್ಟ್‌ಸ್ಕಿಲ್ಸ್‌ಯೋಜನಾ ನಿರ್ದೇಶಕ ಎಂ.ಆರ್.ಶ್ರೀನಿವಾಸ್‌ಮಾತನಾಡಿದರು.
ಆಡಳಿತಾಧಿಕಾರಿ ಡಾ.ಎಂ.ಶ್ರೀನಿವಾಸರೆಡ್ಡಿ, ಉಪಪ್ರಾಂಶುಪಾಲ ಡಾ.ಆರ್.ಎಂ.ಸುನಿಲ್‌ಕುಮಾರ್, ಖಜಾಂಚಿ ಕೆ.ಸಿ.ನಾಗರಾಜ್, ಜಂಟಿ ಕಾರ್ಯದರ್ಶಿ ಎನ್.ಆರ್.ಮುಕೇಶ್, ನಿರ್ದೇಶಕರಾದ ಎಂ.ಕೆ.ವೀಣಾ, ಕೆ.ಆರ್.ಮಂಜುಳಾ, ವರದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರ ನಗರ, ತಾಲೂಕು, ಅಲೀಪುರ ಮತ್ತು ತೊಂಡೇಬಾವಿ ಮತ್ತಿತರ ಕಡೆಗಳಿಂದ 12 ಶಾಲೆಗಳ ಒಟ್ಟು 32 ಶಿಕ್ಷಕರು ತರಬೇತಿ ಪಡೆದರು. ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ, ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಜಯಗಳಿಸಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.


