Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Education News

ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ.62.34ರಷ್ಟು ಫಲಿತಾಂಶ ಅಂದರೆ ಕಳೆದ ವರ್ಷಕ್ಕಿಂತ 8% ಹೆಚ್ಚಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನಗರದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶೇ.
91.12 ರಷ್ಟು ಫಲಿತಾಂಶ ಗಳಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶೇ42.43 ರಷ್ಟು ಫಲಿತಾಂಶ ಗಳಿಸುವ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ಸಚಿವರು ತಿಳಿಸಿದರು.
ಯಾವ ಜಿಲ್ಲೆಗೆ ಯಾವ ಸ್ಥಾನ
?

ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ (ಶೇ.89.96), ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ (ಶೇ.83.19), ಶಿವಮೊಗ್ಗ ಜಿಲ್ಲೆಗೆ 4ನೇ ಸ್ಥಾನ (ಶೇ.82.29), ಕೊಡಗು ಜಿಲ್ಲೆಗೆ 5ನೇ ಸ್ಥಾನ (ಶೇ.82.21) ಮತ್ತು ಕಲಬುರಗಿ ಕೊನೆಯ ಸ್ಥಾನ (ಶೇ42.43) ಪಡೆದುಕೊಂಡಿದೆ ಎಂದು ಸಚಿವರು ತಿಳಿಸಿದರು.
ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಪಡೆದು ರಾಜ್ಯಕ್ಕೆ ಟಾಪರ್‌ಆಗಿ ಹೊರಹೊಮ್ಮಿದ್ದಾರೆ. 8 ಲಕ್ಷ ವಿದ್ಯಾರ್ಥಿಗಳ ಪೈಕಿ, 5 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 74ರಷ್ಟು ಬಾಲಕಿಯರು ಪಾಸಾಗಿದ್ದಾರೆ ಎಂದರು.

625ಕ್ಕೆ 625 ಅಂಕ ಪಡೆದ ಸಾಧಕರು-
ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದವರ ಪೈಕಿ
22 ವಿದ್ಯಾರ್ಥಿಗಳಿಗೆ ಫುಲ್ ಮಾರ್ಕ್ಸ್ ಬಂದಿವೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಪಡೆದಿದ್ದಾರೆ.

ಅಖೀಲ್ ಅಹ್ಮದ್ ನದಾಫ್‌-ಆಕ್ಸ್​ಫರ್ಡ್ ಶಾಲೆ, ವಿಜಯಪುರ, ಭಾವನಾ -ನೀಲಗಿರೇಶ್ವರ ವಿದ್ಯಾನಿಕೇತನ ಶಾಲೆ, ದೇವನಹಳ್ಳಿ, ಎಂ.ಧನಲಕ್ಷ್ಮೀ -ಸೇಂಟ್‌ಯಶ್‌ಶಾಲೆ, ಬೆಂಗಳೂರು ಉತ್ತರ, ಎಸ್.ಧನುಷ್ -ಮರಿಮಲ್ಲಪ್ಪ ಹೈಸ್ಕೂಲ್‌, ಮೈಸೂರು ಜಿಲ್ಲೆ, ಜೆ.ಧೃತಿ -ಸಾಹುಕಾರ್‌ಚಿಕ್ಕನಗೌಡ ಶಾಲೆ, K.R.ಪೇಟೆ, ಮಂಡ್ಯ, ಎಸ್.ಎನ್.ಜಾಹ್ನವಿ ವಿಜಯಭಾರತಿ ವಿದ್ಯಾಲಯ, ಬೆಂಗಳೂರು ದಕ್ಷಿಣ, ಮಧುಸೂಧನ್ ರಾಜ್ -MES ಕಿಶೋರ ಕೇಂದ್ರ, ಬೆಂಗಳೂರು ಉತ್ತರ,

ಮೊಹಮ್ಮದ್ ಮಸ್ತೂರ್ -ಚೇತನ ವಿದ್ಯಾಮಂದಿರ, ತುಮಕೂರು, ಮೌಲ್ಯ ಡಿ. ರಾಜ್ -ರಾಷ್ಟ್ರೀಯ ಅಕಾಡೆಮಿ ಶಾಲೆ, ಹಿರಿಯೂರು, ಚಿತ್ರದುರ್ಗ ಜಿಲ್ಲೆ, ಕೆ.ನಮನ ಪ್ರಿಯದರ್ಶಿನಿ ಹೈಸ್ಕೂಲ್, ಶಿವಮೊಗ್ಗ ಜಿಲ್ಲೆ, ನಮಿತಾ -ಮಾತಾ ನ್ಯಾಷನಲ್‌ಇಂಗ್ಲಿಷ್‌ಶಾಲೆ, ಬೆಂಗಳೂರು ದಕ್ಷಿಣ, ನಂದನ್ -ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಶಾಲೆ, ಹಿರಿಯೂರು, ಚಿತ್ರದುರ್ಗ ಜಿಲ್ಲೆ, ನಿತ್ಯ ಎಂ.ಕುಲಕರ್ಣಿ -ರಾಮಕೃಷ್ಣ ಇಂಗ್ಲಿಷ್‌ಶಾಲೆ, ಶಿವಮೊಗ್ಗ, ರಂಜಿತಾ -ಚಂದ್ರಶೇಖರನಾಥ ಸ್ವಾಮೀಜಿ ಶಾಲೆ, ಬೆಂಗಳೂರು ಗ್ರಾ.ಜಿಲ್ಲೆ, ರೂಪಾ ಪಾಟೀಲ್-ಸರ್ಕಾರಿ ಕಾಂಪೋಸಿಟ್‌ಪಿಯು ಕಾಲೇಜು, ಬೆಳಗಾವಿ, ಸಹಿಷ್ಣು ಎನ್ ಆದಿಚುಂಚನಗಿರಿ ಹೈಸ್ಕೂಲ್‌, ಶಿವಮೊಗ್ಗ ಜಿಲ್ಲೆ, ಶಗುಫ್ತಾ ಅಂಜುಮ್ -ಸರ್ಕಾರಿ ಕಾಂಪೋಸಿಟ್‌ಉರ್ದು ಶಾಲೆ, ಶಿರಸಿ, ಸ್ವಸ್ತಿ ಕಾಮತ್ -ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ ಶಾಲೆ, ಉಡುಪಿ, R.N.ತಾನ್ಯಾ – BKSVB ಶಾಲೆ, ಮೈಸೂರು, ಉತ್ಸವ್ ಪಟೇಲ್ -ವಿಜಯ ಸ್ಕೂಲ್, ಚಿಕ್ಕಹೊನ್ನೇನಹಳ್ಳಿ, ಹಾಸನ, ಯಶ್ವಿತಾ ರೆಡ್ಡಿ -ಚಿರೆಕ್‌ಪಬ್ಲಿಕ್‌ಸ್ಕೂಲ್, ಮಧುಗಿರಿ, ತುಮಕೂರು, ಯುಕ್ತಾ ಎಸ್ -ಹೋಲಿ ಚೈಲ್ಡ್‌ಇಂಗ್ಲಿಷ್‌ಶಾಲೆ, ಬೆಂಗಳೂರು ಉತ್ತರ.

ತುಮಕೂರು‌ಹಾಗೂ ಮಧುಗಿರಿ ಶೈಕ್ಷಣಿಕ‌ಜಿಲ್ಲೆಯಿಂದ ತಲಾ ಒಬ್ಬರು ರಾಜ್ಯಕ್ಕೆ‌ಪ್ರಥಮ ಸ್ಥಾನ ಪಡೆದಿದ್ದಾರೆ. ತುಮಕೂರಿನ ಚೇತನ ವಿದ್ಯಾಮಂದಿರ ಶಾಲೆಯ ವಿದ್ಯಾರ್ಥಿ ಮಹಮದ್ ಮನ್ಸೂರ್ ಅದಿಲ್ ರಾಜ್ಯಕ್ಕೆ 8 ನೇ ರ್ಯಾಂಕ್ ಬಂದಿದ್ದಾರೆ. ಹಾಗೇ ಮಧುಗಿರಿಯ ಚಿರಾಕ್ ಪಬ್ಲಿಕ್‌ಶಾಲೆಯ ಯಶ್ವಿತಾ ರೆಡ್ಡಿ ಕೆ ಬಿ ರಾಜ್ಯ ಟಾಪರ್ ಲಿಸ್ಟ್​ನಲ್ಲಿ 21 ನೇ ಸ್ಥಾನ ಪಡೆದಿದ್ದಾರೆ.

ಉತ್ತೀರ್ಣ ಪ್ರಮಾಣ-
ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ
7,90,890 ಮಕ್ಕಳ ಪೈಕಿ 5,23,075 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 58.07ರಷ್ಟು ಬಾಲಕರು ಪಾಸಾಗಿದ್ದಾರೆ. ಹಾಜರಾಗಿದ್ದ 3,90,311 ಬಾಲಕರ ಪೈಕಿ 2,26,637 ಬಾಲಕರು ಉತ್ತೀರ್ಣರಾಗಿದ್ದಾರೆ. ಶೇಕಡಾ 74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 4,00,579 ಬಾಲಕಿಯರ ಪೈಕಿ 2,96,438 ಬಾಲಕಿಯರು ಪಾಸಾಗಿದ್ದಾರೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶದಲ್ಲಿ ನಗರ ಪ್ರದೇಶದ ಶೇಕಡಾ 67.05ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದ ಶೇಕಡಾ 65.47ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಶೇ 62.7 ಫಲಿತಾಂಶ-
2024-25ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಶೇಕಡಾ 62.7ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಗಳಲ್ಲಿ ಶೇಕಡಾ 58.97ರಷ್ಟು ಮಕ್ಕಳು ಉತ್ತೀರ್ಣರಾಗಿದ್ದರೆ, ಅನುದಾನರಹಿತ ಶಾಲೆಗಳಲ್ಲಿ ಶೇ 75.59ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ 62.34ರಷ್ಟು ಫಲಿತಾಂಶ ಬಂದಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ 91.12) ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ 2ನೇ ಸ್ಥಾನ (ಶೇ 89.96) ಪಡೆದಿದೆ. ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ (ಶೇ 83.19) ದೊರೆತಿದ್ದರೆ, ಶಿವಮೊಗ್ಗ ಜಿಲ್ಲೆಗೆ 4ನೇ ಸ್ಥಾನ (ಶೇ 82.29) ಹಾಗೂ ಕೊಡಗು ಜಿಲ್ಲೆಗೆ 5ನೇ ಸ್ಥಾನ (ಶೇ 82.21) ದೊರೆತಿದೆ. ಕಲಬುರಗಿ ಕೊನೆಯ ಸ್ಥಾನ (ಶೇ 42.43) ದಲ್ಲಿದೆ.

ಬಾಲಕಿಯರದ್ದು ಮೇಲುಗೈ- 2024-25ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಲಕರ ತೇರ್ಗಡೆ ಪ್ರಮಾಣ ಶೇ. 58.07, ಬಾಲಕಿಯರದ್ದು ಶೇ. 74 ರಷ್ಟು ಫಲಿತಾಂಶ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
620ಕ್ಕೂ ಹೆಚ್ಚು ಅಂಕ ಪಡೆದ 327 ವಿದ್ಯಾರ್ಥಿಗಳು-

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 62.34% ಫಲಿತಾಂಶ ಬಂದಿದೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ. ಕಳೆದ ಬಾರಿ ಒಬ್ಬರು ಮಾತ್ರ ಗರಿಷ್ಠ ಅಂಕ ಪಡೆದಿದ್ದರು. ಈ ಬಾರಿ 327 ಮಕ್ಕಳು 620ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ.

240 ಕೇಂದ್ರಗಳಲ್ಲಿ ಮೌಲ್ಯಮಾಪನ-
ಈ ಬಾರಿ ಎಸ್​ಎಸ್​​ಎಲ್​ಸಿ ಪರೀಕ್ಷೆಯ ಮೌಲ್ಯಮಾಪನ
240 ಮೌಲ್ಯಮಾಪನ ಕೇಂದ್ರಗಳಲ್ಲಿ 65,000 ಮೌಲ್ಯಮಾಪಕರಿಂದ ಮೌಲ್ಯಮಾಪನ ನಡೆದಿತ್ತು.

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು