Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನವರಿ 31ಕ್ಕೆ ’ರಾವುತ’ ಚಲನ ಚಿತ್ರ ಬಿಡುಗಡೆ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರ:
ವಿಶ್ವಕರ್ಮ ಸಿನಿಮಾಸ್ ನಿರ್ಮಾಣದ
ರಾವುತಕನ್ನಡ ಚಲನ ಚಿತ್ರವು ಒಂದು ವಿಭಿನ್ನ ಪ್ರಯತ್ನದ ಸಿನಿಮಾ.
ಗಂಡುಗಲಿ ಕುಮಾರರಾಮ ಕಾಲದ ಸಾಮಾನ್ಯ ಜನರ ಮತ್ತು ಸಾಧಕರ ಕಥೆ. ಆದರೆ ಸಿನಿಮಾ ಎಂದರೆ ಸಾಹಸ
, ಪ್ರೀತಿ, ದ್ವೇಷ, ಅಂಥ ಹಲವು ಮಜಲು ಇಟ್ಟುಕೊಂಡು ಬರುತ್ತವೆ. ರಾವುತ ಸಿನಿಮಾ ಹಾಗಿಲ್ಲ, ಅದರ ಎಳೆಯೇ ಕುತೂಹಲ ಭರಿತವಾಗಿದೆ.

 ಅದೇನೆಂದರೆ ಸಾವಿನ ನಂತರ ಏನಾಗುತ್ತೆ ಅನ್ನೋದನ್ನ ಕಥೆಯ ಸಾರವಾಗಿಸಿದ್ದಾರೆ ಕಥೆಗಾರ ಸಿದ್ದುವಜ್ರಪ್ಪ. ಇದರ ವಿಭಿನ್ನ ಕ್ಲೈಮ್ಯಾಕ್ಸ್ ಅರ್ಥವೇ ಸಿನಿಮಾದ ಸಾವಿನ ನಂತರದ ಪಯಣ ತಿಳಿಸುತ್ತದೆ ಎಂದು ಹೇಳಿದ್ದಾರೆ ನಿರ್ಮಾಪಕರು.

ಈ ಸಿನಿಮಾವು ಕನ್ನಡದ ಇನ್ನೊಂದು ನಾಗಮಂಡಲ ಆಗುವ ಲಕ್ಷಣವಿದೆ. ಅದಕ್ಕೆ ಕಾರಣ ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯ ಸಂಸ್ಕೃತಿಯ ದೃಶ್ಯ ಚಿತ್ರಣವಿರುವುದೇ ಇದಕ್ಕೆ ಕಾರಣ ಎಂದು ಇತ್ತೀಚಿಗೆ ನಡೆದ ಪ್ರೀಮಿಯರ್ ಶೋ ನೋಡಿದ ಗಣ್ಯರು ಮಿತ್ರರು ತಿಳಿಸಿದ್ದಾರೆ.

ಜನವರಿ ೩೧ ಕ್ಕೆ  ಜನ ಮನ್ನಣೆ ಪಡೆಯಲು ರಾಜ್ಯಾದ್ಯಂತ ಚಿತ್ರಮಂದಿರಕ್ಕೆ ಬರಲಿದೆ ರಾವುತ’. ಏನೇ ಆಗಲಿ ಕನ್ನಡಕ್ಕೆ ಸೈದ್ಧಾಂತಿಕ  ಪ್ರಯತ್ನ ನಡೆಯುವುದು ವಿರಳ. ಈ ಪ್ರಯತ್ನಕ್ಕೆ  ಜ .೩೧ಕ್ಕೆ ಹೆಸರಾಂತ ನಿರ್ಮಾಪಕ ಜಾಕ್ ಮಂಜು ಅವರ ಶಾಲಿನಿ ಆರ್ಟ್ಸ್ ಸಂಸ್ಥೆಯ ಮುಖಾಂತರ ರಾಜ್ಯಾದ್ಯಂತ ಬಿಡುಗಡೆಗೊಂಡು ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದೆ ರಾವುತ’.

      ನಾಯಕನಾಗಿ ರಾಜ್ ಪ್ರವೀಣ್, ನಾಯಕಿಯಾಗಿ ಭವಾನಿ ಪುರೋಹಿತ್, ಹಾಗೂ ಇನ್ನುಳಿದ ಕಲಾವಿದರೂ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರ್ಮಾಪಕ ಈರಣ್ಣ ಶುಭಾಷ್ ಬಡಿಗೇರ್, ನಿರ್ದೇಶಕ ಸಿದ್ದು ವಜ್ರಪ್ಪ ಮೊದಲ ಚಿತ್ರ ಪ್ರದರ್ಶನದ ತಯಾರಿಯ ಉತ್ಸಾಹದಲ್ಲಿ ಇದ್ದಾರೆ.

ಜ.೩೧ಕ್ಕೆ ಬಿಡುಗಡೆ ಇರುವ ಕಾರಣ ಸದ್ಯದಲ್ಲೇ ಟ್ರೈಲರ್, ಟಿಸರ್ ಬಿಡುಗಡೆ ಆಗಲಿವೆ. ಚಿತ್ರಕ್ಕೆ ಛಾಯಾಗ್ರಹಣ ವಿನಯ್ ಗೌಡ, ಸಂಗೀತ ಸುಚಿನ್ ಶ, ಸಂಕಲನ ಅರವಿಂದ ರಾಜ್, ನೃತ್ಯ ಸೂರಿ ಮಾಸ್ಟರ್,ಸಾಹಿತ್ಯ ಸುರೇಶ ಕಂಬಳಿ, ಅಲ್ಲದೆ ಲಕ್ಷ್ಮೀಕಾಂತ,ರಾಜಶೇಖರ್,ಸಂತು, ಮಾರೇಶ ಕನಕಗಿರಿ, ರಾಘವ ಗೌಡಪ್ಪ, ಯಮನೂರ , ನಾಗರಾಜ ಮದ್ದಾಲಗುಂಡಿ, ಡಿ.ಐ ಕಲರಿಷ್ಟ ಕಿರಣ ಜಯ್ ಕೃಷ್ಣ, ಡಿಜಟಲ್ ಪ್ರಚಾರ ರಮಿತ್ ಏಲಕ್ಕಿ, ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿಯವರದಿದೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ