Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ.21ಕ್ಕೆ ಭೂಸ್ವಾಧೀನ ವಿರೋಧಿಸಿ ಡಿಸಿ ಕಚೇರಿಗೆ ಟ್ರ್ಯಾಕರ್ ಮೆರವಣಿಗೆ

Advertisement

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿಯ ಚಿಕ್ಕ ಬೆಳವಂಗಲ
, ಸೊಣ್ಣೇನಹಳ್ಳಿ, ರಾಂಪುರ, ನಾರನಹಳ್ಳಿ, ಗ್ರಾಮಗಳಿಗೆ ಸೇರಿದ 2100 ಎಕರೆ ಭೂಸ್ವಾಧೀನ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿಗೆ ದೊಡ್ಡಬೆಳವಂಗಲ,‌ಚಿಕ್ಕಬೆಳವಂಗಲ, ಸೊಣ್ಣೇನಹಳ್ಳಿ, ರಾಂಪುರ, ನಾರನಹಳ್ಳಿ ಗ್ರಾಮಗಳ ರೈತರಿಂದ ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದೊಡ್ಡ ಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಪಿ ಶಶಿಧರ್ ತಿಳಿಸಿದರು. 

ತಾಲೂಕಿನ ದೊಡ್ಡಬೆಳವಂಗಲದ ಹಳೇ ನಾಡಕಚೇರಿ ಸಮೀಪದ ಭೂಸ್ವಾಧೀನ ವಿರೋಧಿ ಹೋರಾಟದ ಸ್ಥಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ

ದೊಡ್ಡಬೆಳವಂಗಲ ಸುತ್ತಮುತ್ತಲ್ಲಿನ 5 ಗ್ರಾಮಗಳ 2100 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಇದನ್ನು ವಿರೋಧಿಸಿ ಮಾ.20 ರಿಂದ ಹೋರಾಟ ಆರಂಭಿಸಲಾಯಿತು. ಕೆಐಎಡಿಬಿ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಮುಖ್ಯ ಮಂತ್ರಿಗಳಿಗೂ ಮನವಿ ಮಾಡಲಾಗಿದೆ. ‌ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ‌ಜೀವ ಇರುವವರಿಗೂ ಸರಕಾರಕ್ಕೆ ಭೂಮಿ ಕೊಡುವುದಿಲ್ಲ. ಈವರೆಗೂ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ನಮಗೆ ಸ್ಪಂದಿಸಿಲ್ಲ.‌ರೈತರ ವಿರೋಧಿ ಸರಕಾರಕ್ಕೆ ದಿಕ್ಕಾರ ಹೇಳುತ್ತೇವೆ. ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ‌ಮುಂದಿನ‌ಪೀಳಿಗೆಗರ ನೀಡಬೇಕು. ಕಳೆದ 42 ದಿನಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ.ಆದರೆ ತಾಲೂಕು ಹಾಗೂ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಇಲ್ಲ. ಪ್ರತಿಭಟನೆಯನ್ನು ತೀವ್ರ ಗೊಳಿಸುವ ಸಲುವಾಗಿ

ಮೇ.21ರಂದು ಟ್ರ್ಯಾಕರ್ ಮೆರವಣಿಗೆಯನ್ನು ಹೋರಾಟದ ಸ್ಥಳದಿಂದ ಜಿಲ್ಲಾಧಿಕಾರಿ ಕಚೇರಿಗೆ ಬೆಳಿಗ್ಗೆ 9.30 ಕ್ಕೆ ಆರಂಭಿಸಲಾಗುತ್ತದೆ. ಇಲ್ಲಿನ ರೈತರ ಜಮೀನು ಯಾವುದೇ ಕಾರಣಕ್ಕೂ ನೀಡುವುದಿಲ್ಲ.

ಸದ್ಯ ಅಧಿಕೃತವಾಗಿ 2100 ಎಕರೆ ಸ್ವಾಧೀನ ಮಾಡಿಕೊಳ್ಳಲು ಮೇಲ್ನೋಟಕ್ಕೆ ಹೇಳುತ್ತಿದ್ದಾರೆ. ಆದರೆ ಮೂಲಗಳ ಪ್ರಕಾರ 3 ಸಾವಿರಕ್ಕೂ ಅಧಿಕ ಭೂಮಿಯನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಅಡಿಕೆ ಫಸಲು ಬರುವ ಮುನ್ನವೇ ನಮ್ಮ ಭೂಮಿ ವಶಕ್ಕೆ ಮುಂದಾಗಿದ್ದಾರೆ. ತಾಲೂಕಿನಲ್ಲಿ 18 ಸಾವಿರಕ್ಕೂ ಅಧಿಕ ಭೂಮಿ‌ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಪ್ರಭಾ ಬೆಳವಂಗಲ ಮಾತನಾಡಿ, ಪಕ್ಷ, ಧರ್ಮ, ಜಾತಿ ಮರೆತು ಒಗ್ಗೂಟ್ಟಿನಿಂದ ಹೋರಾಟ ನಡೆಯುತ್ತಿದೆ. ಈಗಾಗಲೇ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. 42 ದಿನ ಕಳೆದರೂ ಕೂಡ ಯಾರು ಸ್ಪಂದಿಸಿಲ್ಲ. ಪ್ರತಿ ಹಳ್ಳಿಗಳಲ್ಲಿ ಹೋರಾಟದ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಎಸ್ ಟಿಆರ್ ಆರ್ ರಸ್ತೆ ಸುತ್ತಮುತ್ತಲಿನ ಎಲ್ಲಾ ಜಮೀನು ಕಬಳಿಸಲು ಮುಂದಾಗುತ್ತಿದೆ. ರೈತರ ವಿರೋಧವನ್ನು ಮನಗಂಡು ರಾತ್ರಿ ವೇಳೆ ಡ್ರೋನ್ ಮೂಲಕ ಸರ್ವೇ ಮಾಡಲಾಗುತ್ತಿದೆ. ಕೆಐಎಡಿಬಿ ವತಿಯಿಂದ ಈಗಾಗಲೇ ಸಾವಿರಾರು ಎಕರೆ ಜಮೀನು ಕಬಳಿಸಲಾಗಿದೆ.

ಈ ತಾಲೂಕಿನಲ್ಲಿ ಮೊದಲ ಬಾರಿಗೆ ಭೂಮಿ ಕೊಡದಿರುವ ಬಗ್ಗೆ ಕೂಗು ರೈತರಿಂದ ಕೇಳಿಬಂದಿದೆ. ಇಲ್ಲಿನ ರೈತರು ಶೇ.99 ರಷ್ಡು ಭೂಮಿ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಈ ಹೋರಾಟ ಚರಿತ್ರೆಯಾಗಲಿದೆ. ಒಗ್ಗಟ್ಟಿನ ಹೋರಾಟ‌ಮಾಡಲಾಗುತ್ತಿದೆ. ಭೂಮಿಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದರು.

ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ನಾರನಹಳ್ಳಿ ಗೋವಿಂದರಾಜ್ ಮಾತನಾಡಿ ಒಂದೂವರೆ ತಿಂಗಳಿನಿಂದ ಹೋರಾಟ ನಡೆಸಿದ್ದರೂ ಯಾವುದೇ ಕ್ರಮವಿಲ್ಲ. ಸರ್ಕಾರ ಈಗಾಗಲೇ ವಶ ಪಡಿಸಿಕೊಂಡಿರುವ ಭೂಮಿಗಳು ಸಾಕಷ್ಟು ಖಾಲಿ ಇವೆ. ಅದನ್ನು ಬಿಟ್ಟು ಈಗ ಬೆಳವಂಗಲ ಭಾಗದ ಭೂಮಿಯನ್ನು ಸ್ವಾದಿನ ಪಡಿಸಿಕೊಳ್ಳಲು ಕೆ. ಐ. ಎ. ಡಿ. B. ಮುಂದಾಗಿದೆ. ಹಿಂದಿನಿಂದಲೂ ಕೃಷಿಯನ್ನೇ ನಂಬಿ ಸ್ಥಳೀಯ ರೈತರು ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಉತ್ತಮ ಪಸಲು ಕೊಡುವಂತ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲಾ ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ತಿಮ್ಮೇಗೌಡ, ಸುನೀಲ್, ಕೇಶವ್ ಮೂರ್ತಿ, ಧರ್ಮೇಂದ್ರ, ರಾಮಕೃಷ್ಣಯ್ಯ, ಮಲ್ಲರಾಜು, ರಮೇಶ್ ,ಆನಂದ್, ಕಿಶೋರ್,  ಲಿಂಗರಾಜು, ವಿಜಯ್ ಕುಮಾರ್, ಕಿಶೋರ್, ಚಿದಾನಂದ್, ಅಭಿಬುಲ್ಲ ಖಾನ್, b. ಸಿ. ನಾಗೇಶ್, ಶಿವಕುಮಾರ್, ಜವರಪ್ಪ, ಜಯರಾಮಯ್ಯ, ತಿಮ್ಮೆಗೌಡ, ಸತೀಶ್, ಕೃಷ್ಣಮೂರ್ತಿ, ಕುಮಾರಸ್ವಾಮಿ, ಮುನಿರಾಜು, ಮೋಹನ್, ಶಿವಗಂಗಯ್ಯ, ಕುಮಾರ್, ಅನಿಲಕುಮಾರ್, ನಿರಂಜನ್, ಅಪ್ಪಯ್ಯಣ್ಣ,ಚನ್ನೇಗೌಡ, ಕೆಂಪೇಗೌಡ, ರಾಮೇಗೌಡ, ಕೃಷ್ಣಮೂರ್ತಿ,ಕರೆಗೆಗೌಡ, ರಾಮೇಗೌಡ, ಮನೋಜ್ ಕುಮಾರ್, ಲಕ್ಕಪ್ಪ, ರಾಜ್ ಕುಮಾರ್, ರಾಮಕೃಷ್ಣಪ್ಪ, ಪ್ರಕಾಶ್,ಸೇರಿದಂತೆ ಅನೇಕರು ಹಾಜರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾನೂನುಬಾಹಿರವಾಗಿ ಕಾರ್ಯದರ್ಶಿ ಮುಂದುವರಿಕೆ: ಹಿರಿಯೂರು TAPCMS ಆಡಳಿತ ಮಂಡಳಿಗೆ ಉಪ ನಿಬಂಧಕರ ಅಂತಿಮ ಎಚ್ಚರಿಕೆಹಿರಿಯೂರು ಉಪಚುನಾವಣೆ: “ಸ್ಥಳೀಯ ಸ್ವಾಭಿಮಾನ”ದ ಕೂಗು ಈಗ ಯಾಕೆ..?ಹಿರಿಯ ಪತ್ರಕರ್ತೆ ವಾಳ್ವೆಕರ್ ಚಿಕಿತ್ಸೆಗೆ 90 ಸಾವಿರ ಬಿಡುಗಡೆ ಮಾಡಿದ‌ ಸಿಎಂರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ತಮಿಳುನಾಡಿನಲ್ಲಿ ಬಿಜೆಪಿ ದಿನೇದಿನೇ ಬಲಿಷ್ಠವಾಗಿ ಬೆಳೆಯುತ್ತಿದೆ– ಆರ್. ಅಶೋಕ್ ವಿಶ್ವಾಸರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೂಮಿಪೂಜೆಇಂಡೋ-ಡಚ್ ಅತ್ಯಾಧುನಿಕ ಹೈನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆ ​ ಜೆಡಿಎಸ್ ಪಕ್ಷದ ಹೋರಾಟಗಳು ಜನಪರವಾಗಿ ಇರುತ್ತವೆ-ನಿಖಿಲ್ಮಳೆ ಅವಾಂತರ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ನಿಖಿಲ್ ವಾಗ್ದಾಳಿ ​ರೈತರನ್ನು ಒಕ್ಕಲೆಬ್ಬಿಸಬೇಡಿ: ಡಿ.ಕೆ.ಶಿ ಪಟಾಲಂ ವಿರುದ್ಧ ನಿಖಿಲ್ ಆಕ್ರೋಶ