Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾ ಅನ್ನದಾನದ ರೂವಾರಿ ಐಶ್ವರ್ಯ ಶರಣ್ ಕುಮಾರ್ ಅವರಿಗೆ ಸನ್ಮಾನ

Advertisement

ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಹುಬ್ಬಳ್ಳಿಯಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಈ ಪ್ರಮುಖ ಸಭೆಯಲ್ಲಿ ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ಮಹಾ ಅನ್ನದಾನದ ರೂವಾರಿ ಶರಣ್ ಕುಮಾರ್ ಅವರಿಗೆ ಸನ್ಮಾನ:
2025-2026
ನೇ ಸಾಲಿನಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮಹಾ ಅನ್ನದಾನ ಪ್ರಸಾದ ಕಾರ್ಯಕ್ರಮದ ರೂವಾರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.

ಚಿತ್ರದುರ್ಗದ ಮದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ದೇವಸ್ಥಾನದ ಆವರಣದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಬೃಹತ್ ಮಹಾ ಅನ್ನದಾನ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಈ ಮಹತ್ತರ ಕಾರ್ಯದ ನೇತೃತ್ವ ಹಾಗೂ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಹಾ ಅನ್ನದಾನ ಸಮಿತಿಯ ಅಧ್ಯಕ್ಷರಾದ ಶರಣ್ ಕುಮಾರ್ ಅವರಿಗೆ ಹುಬ್ಬಳ್ಳಿಯ ಈ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ದೇಶದ ಪ್ರಮುಖ ಸಂಘಟನೆಗಳ ಪದಾಧಿಕಾರಿಗಳು ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಅಯ್ಯಪ್ಪ ಸ್ವಾಮಿ ಮಹಾ ಅನ್ನದಾನ ಪ್ರಸಾದ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಟಿ. ಬಿ. ಶೇಖರ್, SASS ಅಧ್ಯಕ್ಷ ಜಯರಾಮ್, ಇವರೊಂದಿಗೆ ಹುಬ್ಬಳ್ಳಿ ಜಿಲ್ಲಾಧ್ಯಕ್ಷರು, ದಕ್ಷಿಣ ಪ್ರಾಂತ್ಯದ ಮಹಾ ಅನ್ನದಾನ ಪ್ರಸಾದದ ಪದಾಧಿಕಾರಿಗಳು ಹಾಗೂ ದೇಶದ ವಿವಿಧ ರಾಜ್ಯಗಳ ಪ್ರಮುಖರು ಮತ್ತು ಅಯ್ಯಪ್ಪ ಶರಣರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾನೂನುಬಾಹಿರವಾಗಿ ಕಾರ್ಯದರ್ಶಿ ಮುಂದುವರಿಕೆ: ಹಿರಿಯೂರು TAPCMS ಆಡಳಿತ ಮಂಡಳಿಗೆ ಉಪ ನಿಬಂಧಕರ ಅಂತಿಮ ಎಚ್ಚರಿಕೆಹಿರಿಯೂರು ಉಪಚುನಾವಣೆ: “ಸ್ಥಳೀಯ ಸ್ವಾಭಿಮಾನ”ದ ಕೂಗು ಈಗ ಯಾಕೆ..?ಹಿರಿಯ ಪತ್ರಕರ್ತೆ ವಾಳ್ವೆಕರ್ ಚಿಕಿತ್ಸೆಗೆ 90 ಸಾವಿರ ಬಿಡುಗಡೆ ಮಾಡಿದ‌ ಸಿಎಂರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ತಮಿಳುನಾಡಿನಲ್ಲಿ ಬಿಜೆಪಿ ದಿನೇದಿನೇ ಬಲಿಷ್ಠವಾಗಿ ಬೆಳೆಯುತ್ತಿದೆ– ಆರ್. ಅಶೋಕ್ ವಿಶ್ವಾಸರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೂಮಿಪೂಜೆಇಂಡೋ-ಡಚ್ ಅತ್ಯಾಧುನಿಕ ಹೈನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆ ​ ಜೆಡಿಎಸ್ ಪಕ್ಷದ ಹೋರಾಟಗಳು ಜನಪರವಾಗಿ ಇರುತ್ತವೆ-ನಿಖಿಲ್ಮಳೆ ಅವಾಂತರ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ನಿಖಿಲ್ ವಾಗ್ದಾಳಿ ​ರೈತರನ್ನು ಒಕ್ಕಲೆಬ್ಬಿಸಬೇಡಿ: ಡಿ.ಕೆ.ಶಿ ಪಟಾಲಂ ವಿರುದ್ಧ ನಿಖಿಲ್ ಆಕ್ರೋಶ