Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟಿವಿ, ಮೊಬೈಲ್, ವಾಟ್ಸ್ ಆ್ಯಪ್, ಫೇಸ್ ಬುಕ್ ಆರ್ಭಟ ಓದುವ ಸಂಸ್ಕೃತಿ ಕ್ಷೀಣ

Advertisement
 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಟಿವಿ, ಮೊಬೈಲ್, ವಾಟ್ಸ್ ಆ್ಯಪ್, ಫೇಸ್ ಬುಕ್ ಮುಂತಾದ  ಸಾಮಾಜಿಕ ಜಾಲತಾಣಗಳ ಆಕರ್ಷಣೆಯ ಪರಿಣಾಮ ಸಮಾಜದಲ್ಲಿ ಓದುವ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂದು ಪ್ರಾಂಶುಪಾಲ ಪ್ರೊ ಶಿವಣ್ಣ ಆತಂಕ ವ್ಯಕ್ತಪಡಿಸಿದರು

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ  ಆಯೋಜಿಸಿದ್ದ ನನ್ನ ಮೆಚ್ಚಿನ ಪುಸ್ತಕ ಓದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಪಠ್ಯಗಳ ಜತೆಗೆ ಕಥೆ, ಕಾವ್ಯ, ಕಾದಂಬರಿ ವಿವಿಧ ಪುಸ್ತಕಗಳನ್ನು ಓದುವ ಅಭಿರುಚಿ  ಬೆಳೆಸಿಕೊಂಡು ಜ್ಞಾನಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ ಮಂಜುನಾಥ ಮಾತನಾಡಿ, ಓದಿ ಆಸಕ್ತಿ ಜೊತೆ ಜೊತೆಗೆ ಪುಸ್ತಕ ಸ್ನೇಹಿಗಳಾಗಬೇಕು. ಅವು ನಮ್ಮಲ್ಲಿ ಸಮಾನತೆ, ಮಾನವೀಯತೆ, ಸಂವೇದನಾಶೀಲ ಗುಣವನ್ನು ಬೆಳೆಸುತ್ತವೆ. ಅಲ್ಲದೆ ಬದುಕು ಕಟ್ಟಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.

ಪುಸ್ತಕ ಪ್ರಾಧಿಕಾರದ ಸದಸ್ಯ ಅಕ್ಷತಾ ಹುಂಚದಕಟ್ಟೆ  ಮಾತನಾಡಿ ವಿದ್ಯಾವಂತ ಯುವ ಜನರಲ್ಲಿ ಓದಿನ ಆಸಕ್ತಿಯನ್ನು ಪೋಷಿಸಿಕೊಂಡು ಬರುತ್ತಿರುವ ಪ್ರಾಧಿಕಾರದ ನನ್ನ ಮೆಚ್ಚಿನ ಪುಸ್ತಕ ಯೋಜನೆಗೆ ಶಾಲಾ ಕಾಲೇಜು, ಸಂಘ, ಸಂಸ್ಥೆ ಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

25ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನನ್ನ ಮೆಚ್ಚಿನ ಓದು ಕಾರ್ಯಕ್ರಮದಲ್ಲಿ ಚರ್ಚೆಯಾದಂತಹ ಕೃತಿಗಳು ರಾಗಿತೆನೆ - ಐಶ್ವರ್ಯ ಸಿ, ಚೋಮನ ದುಡಿ- ಚೈತ್ರ ಯು, ರಸ್ತೆ ನಕ್ಷತ್ರ - ಸಿಂಚನ, ಸಂವಿಧಾನದ ವಿರೋಧಿಗಳು ಎದುರು-ಪ್ರಿಯಾಂಕ ಬಿ' ಆಡು ಕಾಯೋ ಹುಡುಗನ ದಿನಾಚರಣೆ- ವೈಷ್ಣವಿ, ರಹಸ್ಯ - ಸೃಷ್ಟಿ.ಕೆಎದೆಗೆ ಬಿದ್ದ ಅಕ್ಷರ- ಸಹನಾ ಟಿ, ಹಿತ್ತಲ ಜಗತ್ತು- ಸಿಂಧು ಆರ್, ಊರುಕೇರಿ- ಭೂಮಿಕಾ ಎಂ, ಎಸ್ಚಿರಸ್ಮರಣೆ - ಕಲ್ಪನಾ ಕೆಕಾಗೆ ಮುಟ್ಟಿದ ನೀರು- ಭೂಮಿಕಾ, ಎದೆಯ ಹಣತೆ- ಸುಪ್ರಿಯಾ ಕೆ.ಮೈಸೂರು ಮಲ್ಲಿಗೆ - ಮಾನಸ ಎಂ, ದೇವರು - ನಂದಿನಿ ಆರ್ ಟಿ, ಮೊದಲಾದ ಕೃತಿಗಳು ನನ್ನ ಮೆಚ್ಚಿನ  ಕಾರ್ಯಕ್ರಮದಲ್ಲಿ ವಿವಿಧ ಪುಸ್ತಕಗಳ ಬಗ್ಗೆ ಪ್ರಬಂಧ ಮಂಡಿಸಿದರು.

ಕಾರ್ಯಕ್ರಮದ ಸಂಚಾಲಕಿ ಪ್ರೊ ಟಿ ಗಾಯಿತ್ರಮ್ಮ, ಇಂಗ್ಲಿಷ್ ವಿಭಾಗದ ಪಿ. ಎನ್ ಪ್ರೊ ಮಧುಸೂದನ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ ವಿಜಯಲಕ್ಷ್ಮಿ ಮಾತನಾಡಿದರು ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಕನಕರಾಜ, ಗಿರೀಶ್, ಗ್ರಂಥಪಾಲಕ ಕುಮಾರಸ್ವಾಮಿ, ಉಪನ್ಯಾಸಕ ಟಿ ಶಿವಣ್ಣ, ಟಿ ನಂದಿನಿ, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ