Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಶಿಕಾಂತರ ’ತಂತ್ರ’ಕ್ಕೆ ಯು/ಎ ಸರ್ಟಿಫಿಕೇಟ್

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಲ್ವರ್‌ಸ್ಕೈ ಪ್ರೊಡಕ್ಷನ್ ಸಿನಿಮಾ ಸಂಸ್ಥೆ ಬೆಂಗಳೂರು ನಿರ್ಮಿಸುತ್ತಿರುವ   ಕುತೂಹಲಭರಿತ ಹಾರರ್ ಕಥಾ ಹಂದರ ಹೊಂದಿರುವ 
ತಂತ್ರಎಂಬ ಹೆಸರಿನ ಚನಲಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ದೊರೆತಿದೆ.      ಬೆಂಗಳೂರು ಜೊತೆಗೆ ಕಿತ್ತೂರ ಕರ್ನಾಟಕದ ಬೆಳಗಾವಿ, ಸಂಕೇಶ್ವರ, ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

 ಉತ್ತರ ಕರ್ನಾಟಕದ ಜನಪ್ರಿಯ ಜಾನಪದ ಕಲಾವಿದ ಮಾಳು ನಿಪನಾಳ ಹಾಡಿದ  ಜಾತ್ರೆ ಹೊಂಟೈತಿಹಾಡು  ಮೂರು ಲಕ್ಷ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. 

 ಈ ಚಿತ್ರದಲ್ಲಿ  ನಾಯಕ, ನಿರ್ಮಾಪಕರಾಗಿರುವ ವಿಜಯಪುರದ ಶಶಿಕಾಂತ್ ಈಗಾಗಲೇ ಹಲವಾರು ಕಿರುಚಿತ್ರಗಳು, ಆಲ್ಬಂಗಳನ್ನು ನಿರ್ಮಿಸಿದ್ದಲ್ಲದೆ ೨ಸಾವಿರಕ್ಕೂ ಹೆಚ್ಚು ನೃತ್ಯಪಟುಗಳಿಗೆ ನೃತ್ಯವನ್ನು ಕಲಿಸಿದ ನೃತ್ಯ ನಿರ್ದೇಶಕರು ಮತ್ತು ಎಂಬಿಎ ಪದವೀಧರರು.

 ನಾಯಕಿಯರಾಗಿ ಸೌಜನ್ಯ ಮತ್ತು ಮೇಘಾ, ಹಾಗೂ ಎರಡನೇ ನಾಯಕನಾಗಿ ನಟ ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ಸಾಮ್ರಾಟ್ ನಟಿಸುತ್ತಿದ್ದಾರೆ. ಪಾರು ದಾವಣಗೆರೆ ಒಂದು ವಿಶೇಷವಾದ ಗೀತೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಹಾಸ್ಯ ಪಾತ್ರದಲ್ಲಿ ಜೈ ಅಮೋಘ ದಾಸ್ ನಟಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ ಸಂತೋಷ ಕೇರಿ ಎಂಬ ಜನಪ್ರಿಯ ಯೂಟ್ಯೂಬರ್ ಸಹ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

    ಛಾಯಾಗ್ರಹಣ-ರೋಹನ ದೇಸಾಯಿ, ವರ್ಧನ ಬಾಗಲಕೋಟೆ, ಕಥೆ-ವಿಶ್ವನಾಥ, ಶಶಿಕಾಂತ, ಸಾಮ್ರಾಟ, ಚಿತ್ರಕಥೆ,ಸಂಭಾಷಣೆ-ವಿಶ್ವನಾಥ, ಸಾಮ್ರಾಟ, ಸಂಗೀತ ನಿರ್ದೇಶನ-ರಮೇಶ್ ಕೃಷ್ಣ , ರೋಹನ್ ದೇಸಾಯಿ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪ್ರಖ್ಯಾತ ಗಾಯಕರಾದ ರಾಜೇಶಕೃಷ್ಣ   ಓಂ ನಮೋಎಂಬ ಹಾಡನ್ನು ಹಾಡಿದ್ದಾರೆ. 

ಮೂರು ಹಾಡುಗಳಿಗೆ  ಮಾಳು ನಿಪನಾಳಪ್ರಣತಿ ರಾವ್, ಆರಿಫ್ ಅಸ್ಲಾಂ , ಮೇಘನಾ ಕುಲಕರ್ಣಿ  ಧ್ವನಿ ನೀಡಿದ್ದಾರೆ, ಸಂಕಲನ ಮತ್ತು ಡಿಐ ಓಂ ಸರವಣನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ವಿಜಯಪುರದ ನಟರಾಜ ಎಂದೆ ಖ್ಯಾತರಾದ ಶಶಿಕಾಂತ್ ಪಿ ನಾಟಿಕರ್ ನಟಿಸಿ ನಿರ್ಮಿಸುತ್ತಿರುವ

ಈ ಚಿತ್ರಕ್ಕೆ, ಸಹ ನಿರ್ದೇಶನ   ಸಾಮ್ರಾಟ ಶ್ರೀನಿವಾಸ.ಎಸ್.ಸಿ, ಅಶೋಕ ಕಂಬ್ಳಿ, ಸಹಾಯಕ ನಿರ್ದೇಶನ ವಿತೇಶ ಮಂಜುನಾಥ ರಾಜ, ಅಜಯ ಎ.ಜೆ, ದುರ್ಗೇಶ(ರಾಯದುರ್ಗ),ಭರಣಿ, ಸುಮಂತ ಕಾಮತ, ಮಂಜುನಾಥ ಬಂಕಾಪೂರ ,ಈ ಮೊದಲೇ ಶಂಖನಾದ ಚಲನಚಿತ್ರ  ನಿರ್ದೇಶಿಸಿದ್ದ ಗುಳೇದಗುಡ್ಡದ  ವಿಶ್ವನಾಥ   ಅವರ ನಿರ್ದೇಶನದ ಎರಡನೇ ಚಿತ್ರ ಇದಾಗಿದೆ. ಸಧ್ಯದಲ್ಲೇ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡುವ ಕುರಿತು ಚಿತ್ರತಂಡ ತಯ್ಯಾರಿ ನಡೆಸಿದೆ.    

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ