ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಮಧುರನಾಹೊಸಹಳ್ಳಿ ಗ್ರಾಮದ ಮುನಿರಾಜ್ ಎಂಬುವರ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಹೊತ್ತಿ ಉರಿದ ಘಟನೆಯೊಂದು ನೆಡೆದಿದೆ.
ರಾಸುಗಳಿಗಾಗಿ ವರ್ಷ ಪೂರ್ಣ ಜೀವ ನಾಂಶಕ್ಕಾಗಿ ಕೂಡಿಟ್ಟ ಹುಲ್ಲಿನ ಬಣವೆ ಕ್ಷಣ ಮಾತ್ರದಲ್ಲಿ ಸುಟ್ಟು ಹೋಗಿದ್ದೆ ಮಧುರನಾ ಹೋಸಹಳ್ಳಿ ಗ್ರಾಮದ ಕಾಲೋನಿಯಲ್ಲಿ ಮುನಿರಾಜ್ ಎಂಬುವರಿಗೆ ಸೇರಿದ 100 ಕ್ಕೂ ಹೆಚ್ಚು ಹುಲ್ಲಿನ ಕಂತೆ ಗಳಿದ್ದ ಬಣವೆ ಬೆಂಕಿ ತಗಲಿ ಎಂದು ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಲಾಗಿದ್ದು ಅಗ್ನಿಶಾಮಕ ದಳ ಸಿಬ್ಬಂದಿ ಬರುವುದು ತಡವಾದ ಹಿನ್ನೆಲೆ ಹುಲ್ಲಿನ ಬಣವೆ ಸಂಪೂರ್ಣ ಉರಿದು ಭಸ್ಮವಾಗಿದೆ. ಗ್ರಾಮಸ್ಥರು ಬೆಂಕಿ ನಂದಿಸಲು ಎಷ್ಟೆ ಸಾಹಾಸ ಪಟ್ಟರು ಬೆಂಕಿ ನಂದಿಸಲು ಸಾದ್ಯವಾಗಲಿಲ್ಲ
ಕಳೆದ ವರ್ಷ ಮುನಿರಾಜ್ ಎಂಬ ರೈತನ ಮನೆಯಲ್ಲಿದ್ದ 8 ಮೇಕೆಗಳು ಕಳ್ಳತನ ವಾಗಿತ್ತು. ಈಗ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮ ವಾಗಿದ್ದುನ್ನು ಕಂಡು ರೈತ ಮುನಿರಾಜು ದಿಕ್ಕು ತೋಚದ ಸ್ಥಿತಿಗೆ ಬಂದು ನಿಂತಿದ್ದಾರೆ.
ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದರು ಪ್ರಯೋಜನ ವಾಗಲಿಲ್ಲ ತಡವಾಗಿ ಬಂದ ಅಗ್ನಿಶಾಮಕ ವಾಹನ ಸಿಬ್ಬಂದಿ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ಇಂತಹ ಘಟನೆಗಳು ಗ್ರಾಮಾಂತರ ಬಾಗದಲ್ಲಿ ಘಟನೆಗಳು ನೆಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿ ಶಾಮಕ ವಾಹನಗಳನ್ನು ಒದಗಿಸುವಂತೆ ಗ್ರಾಮಸ್ಥರು ಸರ್ಕಾರ ವನ್ನು ಆಗ್ರಹಿಸಿದ್ದಾರೆ.