ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಸ್ಕಾಂ ಸಂಸ್ಥೆಯ ಟಿಐಸಿ ದಾಸ್ ವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ, ಅತ್ಯಂತ ಪ್ರತಿಭಾವಂತ ಹಾಗೂ ಜನಾನುರಾಗಿ ಇಂಜಿನಿಯರ್ ಎಂದೇ ಖ್ಯಾತರಾಗಿದ್ದ ಹೆಚ್.ಜಿ ರೇಣುಕಾಪ್ರಸಾದ್(51) ಅವರು ಮಧ್ಯರಾತ್ರಿ ಶಿವೈಕ್ಯರಾಗಿದ್ದಾರೆ.
ಮೃತರಿಗೆ ಪತ್ನಿ, ಓರ್ವ ಪುತ್ರ, ಮೂರು ಮಂದಿ ಸಹೋದರರು, ತಂದೆ, ತಾಯಿ ಸೇರಿದಂತೆ ಕನ್ನಡಪ್ರಭದ ಬಿ.ವಿ ಮಲ್ಲಿಕಾರ್ಜುನಯ್ಯ ಅವರ ಸಹೋದರಿಯ ಪುತ್ರರಾಗಿದ್ದು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಅವರ ನಿಧನದ ಸುದ್ಧಿಯು ಬೆಸ್ಕಾಂ ವಲಯ ಹಾಗೂ ಅವರ ಮಿತ್ರವೃಂದದಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ. ಒಬ್ಬ ದಕ್ಷ ಅಧಿಕಾರಿ ಮತ್ತು ಅದ್ಭುತ ವ್ಯಕ್ತಿತ್ವದ ಗೆಳೆಯನನ್ನು ಕಳೆದುಕೊಂಡಿರುವುದಕ್ಕೆ ಅವರ ಸಹೋದ್ಯೋಗಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಅಂತ್ಯಕ್ರಿಯೆಯ ವಿವರ:
ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮ ದೊಡ್ಡಬಳ್ಳಾಪುರ ತಾಲೂಕು ಮದುರೆ ಹೋಬಳಿಯ ಹೊನ್ನಾವರ ಗ್ರಾಮದ ತೋಟದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆ ನಂತರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
"ನಮ್ಮ ಪ್ರೀತಿಯ ಗೆಳೆಯ ಮತ್ತು ಪ್ರತಿಭಾವಂತ ಇಂಜಿನಿಯರ್ ರೇಣುಕಾಪ್ರಸಾದ್ ಅವರ ಅಗಲಿಕೆ ನಮಗೆ ತುಂಬಲಾರದ ನಷ್ಟ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ." ಎಂದು ಅವರ ಆಪ್ತರು ಸಂತಾಪ ಸೂಚಿಸಿದ್ದಾರೆ.


