Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೋಮು ಸೌಹಾರ್ದತೆ ಕದಡುವುದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ: ಹೈಕೋರ್ಟ್

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಮನುಷ್ಯ ಬದುಕಲು ಸೌಹಾರ್ದತೆಯೇ ಅತ್ಯುತ್ತಮ ಮಾರ್ಗ. ಅದನ್ನು ಕದಡುವ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುವುದರಿಂದ ದೇಶದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ" ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 24 ಗಂಟೆಗಳಲ್ಲಿ 'ಬಿ' ರಿಪೋರ್ಟ್ (ಬಿ-ವರದಿ) ಸಲ್ಲಿಸಿದ್ದನ್ನು ಪ್ರಶ್ನಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಮಂಗಳೂರಿನ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದ್ವೇಷ ಉತ್ತೇಜನ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಮಹತ್ವದ ಆಕ್ಷೇಪಣೆ ವ್ಯಕ್ತಪಡಿಸಿ, ತೀರ್ಪನ್ನು ಕಾಯ್ದಿರಿಸಿದೆ.

Advertisement

ವಾದ-ಪ್ರತಿವಾದದ ಪ್ರಮುಖ ಅಂಶಗಳು:
ಅರ್ಜಿದಾರರ ವಾದ: ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, "ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣದಲ್ಲಿ ಪೊಲೀಸರು ತರತುರಿಯಲ್ಲಿ 24 ಗಂಟೆಯೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯ ಕಾಮೆಂಟ್ ಮಾಡಿದ್ದಕ್ಕೆ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ಯಾವುದೇ ಅಪರಾಧಿಕ ಅಂಶಗಳಿಲ್ಲ. ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸದೇ ಅನಗತ್ಯವಾಗಿ ಪ್ರಕರಣ ದಾಖಲಿಸಲಾಗಿದೆ" ಎಂದು ಪೀಠಕ್ಕೆ ವಿವರಿಸಿದರು.

ಸರ್ಕಾರದ ಪರ ವಾದ: ರಾಜ್ಯ ಸರ್ಕಾರದ ಪರ ಆಕ್ಷೇಪ ವ್ಯಕ್ತಪಡಿಸಿದ ವಕೀಲರು, "ಅರ್ಜಿದಾರರು ಸಮಾಜದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಪೋಸ್ಟ್ ಮಾಡಿದ್ದಾರೆ. ಒಂದು ಸಮುದಾಯದ ಆಚರಣೆಯ ಬಗ್ಗೆ ಈ ರೀತಿ ಕಾಮೆಂಟ್ ಮಾಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇಂತಹ ಘಟನೆಗಳಿಂದ ಬಂದ್‌ಗಳು ನಡೆದು ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗುತ್ತದೆ. ಮಂಗಳೂರು ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಬಹುಮುಖ್ಯವಾಗಿದ್ದು, ತನಿಖೆಗೆ ಅನುಮತಿ ನೀಡಬೇಕು. ಪ್ರಕರಣದಲ್ಲಿ ಯಾವುದೇ ತಪ್ಪಿಲ್ಲದಿದ್ದರೆ ಪೊಲೀಸರೇ ಬಿ-ರಿಪೋರ್ಟ್ ನೀಡಲಿದ್ದಾರೆ" ಎಂದು ಪ್ರಬಲವಾಗಿ ವಾದಿಸಿದರು.

ಹೈಕೋರ್ಟ್ ಖಾರವಾದ ಪ್ರಶ್ನೆ ಹಾಗೂ ಬೇಸರ:
ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, "ಜನರು ಅನಾದಿ ಕಾಲದಿಂದಲೂ ತಮ್ಮದೇ ಆದ ಹಬ್ಬ, ಸಂಪ್ರದಾಯಗಳನ್ನು ಆಚರಿಸಿಕೊಂಡು ಬಂದಿದ್ದಾರೆ. ಪ್ರತಿಯೊಂದಕ್ಕೂ ಮತ್ತೊಂದು ಸಮುದಾಯದ ಆಚರಣೆಯ ಕಡೆಗೆ ಬೊಟ್ಟು ಮಾಡಿ ತೋರಿಸುವುದು ಏಕೆ? ಸೌಹಾರ್ದತೆಯಿಂದ ಬದುಕುವುದನ್ನು ಬಿಟ್ಟು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವ ಇಂತಹ ಪೋಸ್ಟ್‌ಗಳಿಂದ ಯಾವ ಪ್ರಗತಿ ಸಾಧ್ಯ?" ಎಂದು ಪ್ರಶ್ನಿಸಿತು. ಜೊತೆಗೆ, ಅರ್ಜಿದಾರರ ವಿರುದ್ಧ ಈಗಾಗಲೇ 20 ಪ್ರಕರಣಗಳು ದಾಖಲಾಗಿರುವುದನ್ನು ಉಲ್ಲೇಖಿಸಿ, "ಏಕೆ ಇಷ್ಟೊಂದು ಕೇಸ್‌ಗಳು ನಿಮ್ಮ ಮೇಲಿವೆ?" ಎಂದು ನೇರವಾಗಿ ಕೇಳಿತು.

ಇಬ್ಬರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ಅರ್ಜಿ ಕುರಿತ ಅಂತಿಮ ಆದೇಶವನ್ನು ಕಾಯ್ದಿರಿಸಿದೆ. ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧದ ತನಿಖೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಮುಂದುವರೆಸಿ ಆದೇಶಿಸಿದೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆಪ್ಟೆಂಬರ್ 5ರಂದು ದೊಡ್ಡಬಳ್ಳಾಪುರದಲ್ಲಿ ಪ್ರಜಾ ಆಂದೋಲನ ಸಭೆಶ್ರೀಕೃಷ್ಣ ಜನ್ಮಾಷ್ಟಮಿನಟ 'ದುನಿಯಾ' ವಿಜಯ್‌ಹಾಗೂ ನಾಗರತ್ನ ದಾಂಪತ್ಯ ಜೀವನ ಅಂತ್ಯ, 2 ಕೋಟಿ ಜೀವನಾಂಶ: ಹೈಕೋರ್ಟ್‌!ಕೆಪಿಎಸ್‌ಸಿ ಅಕ್ರಮ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಅಸ್ತ್ರಕ್ಕೆ ಸಜ್ಜಾದ ರಾಜ್ಯ ಸರ್ಕಾರ!ಕೆರೆ ನೀರಿನಲ್ಲಿ ಅಡಗಿದ್ದ ಕಳ್ಳನನ್ನು ಸಿನಿಮೀಯ ರೀತಿ ನೀರಿಗೆ ಇಳಿದು ಹಿಡಿದ ಪೊಲೀಸರುಎಇಇ ಅಕ್ರಮ ನೇಮಕಾತಿ: ಪ್ರಿಯಾಂಕ್ ಖರ್ಗೆಗೆ 10 ನೇರ ಪ್ರಶ್ನೆ ಕೇಳಿದ ಹೆಚ್.ಡಿ. ಕುಮಾರಸ್ವಾಮಿಮತದಾರರ ಪಟ್ಟಿಯಲ್ಲಿ ಎಪಿಕ್ ಸಂಖ್ಯೆ ಯಥಾವತ್, ಹೆಸರು ಬದಲಾವಣೆ: ಹೈಕೋರ್ಟ್ ನೋಟಿಸ್ಕೋಮು ಸೌಹಾರ್ದತೆ ಕದಡುವುದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ: ಹೈಕೋರ್ಟ್ಬೆಂಗಳೂರಿನಲ್ಲಿ 'ಸಮಗ್ರ ಪಾರ್ಕಿಂಗ್‌ನಿಯಮ'ಗಳ ಕರಡು ಪ್ರಕಟ: ಮನೆ ಮುಂದೆ ಪಾರ್ಕಿಂಗ್‌ಗೆ ಬ್ರೇಕ್!ನೈಸ್ ರಸ್ತೆ ಸಂತ್ರಸ್ತ ರೈತರಿಗೆ ಸಿಹಿ ಸುದ್ದಿ: 1 ಎಕರೆಗೆ ಗರಿಷ್ಠ 15 ನಿವೇಶನ ಪರಿಹಾರ ನೀಡಲು ಸಂಪುಟ ಉಪಸಮಿತಿ ನಿರ್ಧಾರ