Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶ್ರೀಕೃಷ್ಣ ಜನ್ಮಾಷ್ಟಮಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 4 2026 (ಶ್ರಾವಣ ಕೃಷ್ಣ ಅಷ್ಟಮಿ) ರಂದು ಆಚರಿಸಲಾಗುವುದು.

ಆಚರಣೆ: ಭಾರತದಲ್ಲಷ್ಟೇ ಅಲ್ಲ, ಸಂಪೂರ್ಣ ವಿಶ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅರ್ಥಾತ್ ಶ್ರೀಕೃಷ್ಣ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣಜನ್ಮಾಷ್ಟಮಿಯು ಒಂದು ಹಬ್ಬ, ವ್ರತ ಮತ್ತು ಉತ್ಸವವಾಗಿದೆ.

Advertisement

ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವ:
ಗೋಕುಲ, ಮಥುರಾ, ಬೃಂದಾವನ, ದ್ವಾರಕಾ, ಪುರಿ ಇವು ಶ್ರೀಕೃಷ್ಣನ ಉಪಾಸನೆಗೆ ಸಂಬಂಧಿಸಿದ ಪವಿತ್ರಸ್ಥಾನಗಳಾಗಿವೆ. ಇಲ್ಲಿ ಈ ಉತ್ಸವವನ್ನು ವಿಶೇಷ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಬೃಂದಾವನದಲ್ಲಿ ಡೋಲೋತ್ಸವವಾಗುತ್ತದೆ. ಅದು ನೋಡಲು ಆನಂದದಾಯಕವಾಗಿರುತ್ತದೆ. ಇತರ ಕ್ಷೇತ್ರಗಳ ಅನೇಕ ಸ್ಥಳಗಳಲ್ಲಿ ಶ್ರೀಕೃಷ್ಣನ ದೇವಾಲಯದಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಈ ದಿನ ಕೆಲವರು ತಮ್ಮ ಮನೆಯಲ್ಲಿಯೇ ಗೋಕುಲ-ಬೃಂದಾವನದಂತೆ ಪ್ರತಿರೂಪ ಮಾಡಿ ಶ್ರೀಕೃಷ್ಣನ ಜನ್ಮೋತ್ಸವವನ್ನು ಆಚರಿಸುತ್ತಾರೆ. ವೈಷ್ಣವ ಪಂಥೀಯರು ಈ ದಿನವನ್ನು ಅತೀವ ಭಕ್ತಿಭಾವದಿಂದ ಆಚರಿಸುತ್ತಾರೆ. ಅನೇಕ ವೈಷ್ಣವ ದೇವಾಲಯಗಳಲ್ಲಿ ದೀಪಾರಾಧನೆ, ಶೋಭಾಯಾತ್ರೆ, ಕೃಷ್ಣಲೀಲೆ, ಭಾಗವತ ಪಠಣ, ಕೀರ್ತನೆ, ಭಜನೆ, ನೃತ್ಯ-ಗಾಯನ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮವು ಶ್ರಾವಣ ಕೃಷ್ಣ ಪಾಡ್ಯದಿಂದ ಶ್ರಾವಣ ಕೃಷ್ಣಾಷ್ಟಮಿಯವರೆಗೂ ನಡೆಯುತ್ತದೆ.

ಶ್ರೀಕೃಷ್ಣಜನ್ಮಾಷ್ಟಮಿ ವ್ರತ:
ಈ ವ್ರತವನ್ನು ಅಷ್ಟಮಿಯಂದು ಮಾಡಲಾಗುತ್ತದೆ ಮತ್ತು ಎರಡನೆಯ ದಿನ ಅರ್ಥಾತ್ ಶ್ರಾವಣ ಕೃಷ್ಣ ನವಮಿಯಂದು ಪಾರಾಯಣ ಮಾಡಿ ವ್ರತವನ್ನು ಸಂಪನ್ನಗೊಳಿಸುತ್ತಾರೆ. ಈ ವ್ರತವು ಎಲ್ಲರೂ ಮಾಡುವಂತಹದ್ದಾಗಿದೆ. ಈ ವ್ರತವನ್ನು ಮಕ್ಕಳು, ಯುವಕರು, ವೃದ್ಧರು, ಸ್ತ್ರೀ- ಪುರುಷರು ಎಲ್ಲರೂ ಮಾಡಬಹುದು. ಪಾಪನಾಶ, ಸೌಖ್ಯವೃದ್ಧಿ, ಸಂತತಿ-ಸಂಪತ್ತಿ ಮತ್ತು ವೈಕುಂಠ ಪ್ರಾಪ್ತಿಯು ಈ ವ್ರತದ ಫಲವಾಗಿದೆ.

ಶ್ರೀಕೃಷ್ಣಜನ್ಮಾಷ್ಟಮಿಯ ವ್ರತಕ್ಕೆ ಸಂಬಂಧಿಸಿದ ಉಪವಾಸ:
ಈ ದಿನ ದಿನವಿಡೀ ಉಪವಾಸವನ್ನು ಮಾಡಲಾಗುತ್ತದೆ. ನಿರಾಹಾರ ಉಪವಾಸವು ಸಾಧ್ಯವಿಲ್ಲದಿದ್ದರೆ ಫಲಾಹಾರ ಮಾಡಬಹುದು. ಇದಕ್ಕೆ ಒಂದು ದಿನ ಮುಂಚೆ ಅರ್ಥಾತ್ ಶ್ರಾವಣ ಕೃಷ್ಣ ಸಪ್ತಮಿಯಂದು ಅಂಶಾತ್ಮಕ ಭೋಜನವನ್ನು ಮಾಡುತ್ತಾರೆ.

ಶ್ರೀಕೃಷ್ಣಜನ್ಮಾಷ್ಟಮಿಯ ಪೂಜಾವಿಧಿ:
ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಭಗವಾನ ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದ್ದನು. ಆದುದರಿಂದ ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಧ್ಯರಾತ್ರಿಯಲ್ಲಿ ಮಾಡಲಾಗುತ್ತದೆ. ಮಧ್ಯರಾತ್ರಿ ಸ್ನಾನವನ್ನು ಮಾಡಿ ಪೂಜೆಯನ್ನು ಆರಂಭಿಸಲಾಗುತ್ತದೆ.
ಭಗವಾನ ಶ್ರೀಕೃಷ್ಣನ ಜನ್ಮವಾಗಿದೆಎಂಬ ಧಾರಣೆಯಿಂದ ಪೂಜೆಯನ್ನು ಮಾಡಬೇಕು.

 news_1788436096_8_141.webp

 

ಪೂಜೆಯ ತಯಾರಿ:
೧. ಪೂಜೆಗೆ ಮಣೆಯ ಮೇಲೆ ಭಗವಾನ ಶ್ರೀಕೃಷ್ಣನ ಮೂರ್ತಿಯನ್ನು ಇಡಿರಿ.
೨. ಅನಂತರ ಶ್ರೀಕೃಷ್ಣನ ಮೂರ್ತಿಗೆ ಚಂದನ ತಿಲಕವನ್ನು ಹಚ್ಚಿರಿ.
೩. ಅನಂತರ ಪುಷ್ಪವನ್ನು ಅರ್ಪಿಸಿರಿ.
೪. ಸಾಧ್ಯವಿದ್ದಲ್ಲಿ ಕೃಷ್ಣಕಮಲವನ್ನು ಅರ್ಪಿಸಿರಿ.
೫. ಈಗ ಶ್ರೀ ಕೃಷ್ಣನಿಗೆ ತುಳಸಿಯನ್ನು ಅರ್ಪಿಸಿರಿ.

೬. ಸಾಧ್ಯವಿದ್ದಲ್ಲಿ ತುಳಸಿಯ ಮಾಲೆಯನ್ನು ಅರ್ಪಿಸಿರಿ.
೭. ಈಗ ಊದುಬತ್ತಿಯನ್ನು ತೋರಿಸಿರಿ. ಎರಡು ಊದುಬತ್ತಿಗಳನ್ನು ತೆಗೆದುಕೊಂಡು ದಕ್ಷಿಣಾವರ್ತದಲ್ಲಿ ಮೂರು ಬಾರಿ ಸುತ್ತಿಸಿ.
೮. ಈಗ ದೀಪವನ್ನು ತೋರಿಸಿ.
೯. ಈಗ ಮೊಸರವಲಕ್ಕಿಯ ನೈವೇದ್ಯ ವನ್ನು ನಿವೇದಿಸಿ.

೧೦. ಪ್ರದಕ್ಷಿಣೆ: ಪೂಜಾವಿಧಿಯ ನಂತರ ಸಾಧ್ಯವಿದ್ದರೆ ಭಗವಾನ ಶ್ರೀಕೃಷ್ಣನಿಗೆ ಕಡಿಮೆಯೆಂದರೆ ಮೂರು ಅಥವಾ ಮೂರರ ಪಟ್ಟಿನಲ್ಲಿ ಪ್ರದಕ್ಷಿಣೆಯನ್ನು ಹಾಕಿರಿ. ಪ್ರದಕ್ಷಿಣೆಯನ್ನು ಹಾಕುವುದು ಸಾಧ್ಯವಿಲ್ಲದಿದ್ದಲ್ಲಿ ನಿಂತಲ್ಲಿಯೇ ಸುತ್ತ ತಿರುಗಿ ಪ್ರದಕ್ಷಿಣೆ ಹಾಕಿರಿ.

೧೧. ಅನಂತರ ಶರಣಾಗತ ಭಾವದಿಂದ ನಮಸ್ಕಾರ ಮಾಡುತ್ತಾ ಪ್ರಾರ್ಥನೆಯನ್ನು ಮಾಡಿರಿ.
೧೨. ಅಂತ್ಯದಲ್ಲಿ ಎಲ್ಲರೊಂದಿಗೆ ಪ್ರಸಾದವನ್ನು ಗ್ರಹಿಸಿ.
ಇಲ್ಲಿ ಗಮನದಲ್ಲಿಡಲು ಯೋಗ್ಯವಾಗಿರುವ ಅಂಶವೆಂದರೆ, ಪೂಜಾವಿಧಿಯಲ್ಲಿ ಸಂಪ್ರದಾಯ, ಪ್ರದೇಶ, ರೂಢಿ ಇತ್ಯಾದಿಗಳಿಗನುಸಾರ ಸ್ವಲ್ಪ ವ್ಯತ್ಯಾಸವಾಗಬಹುದು.

ಶ್ರೀಕೃಷ್ಣಜನ್ಮಾಷ್ಟಮಿಯಂದು ಇವುಗಳನ್ನು ಮಾಡಿ!:
೧. ತಮ್ಮ ಬಂಧು ಮಿತ್ರರಿಗೆ ಕಿರುಸಂದೇಶಗಳನ್ನು ಕಳುಹಿಸಿ ಅವರಿಗೆ ಶ್ರೀಕೃಷ್ಣನ ನಾಮಜಪವನ್ನು ಮಾಡಲು ಹೇಳಿರಿ!.
೨. ಶ್ರೀಕೃಷ್ಣನ ದೇವಸ್ಥಾನದಲ್ಲಿ ಸ್ವಚ್ಛತೆಯ ಸೇವೆಯನ್ನು ಮಾಡಿ!.
೩. ಶ್ರೀಕೃಷ್ಣನ ಅವಮಾನವಾಗುತ್ತಿರುವುದು ಕಂಡು ಬಂದಲ್ಲಿ ಅದನ್ನು ತಡೆಗಟ್ಟಿರಿ!.
೪. ಈ ದಿನ ಕೃಷ್ಣತತ್ತ್ವವು ಹೆಚ್ಚು ಪ್ರಮಾಣದಲ್ಲಿರುವುದರಿಂದ ಅದನ್ನು ಗ್ರಹಿಸಲು ಓಂ ನಮೋ ಭಗವತೇ ವಾಸುದೇವಾಯನಾಮಜಪವನ್ನು ಮಾಡಿ! : ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣತತ್ತ್ವವು ಇತರ ದಿನಗಳ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಅಂದರೆ ೧ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದುದರಿಂದ ಶ್ರೀಕೃಷ್ಣನ ಚೈತನ್ಯದಾಯಕ ತತ್ತ್ವಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಈ ಲಹರಿಗಳಿಂದ ಜೀವಕ್ಕೆ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಈ ಎರಡೂ ಸ್ತರಗಳಲ್ಲಿ ಲಾಭವಾಗುತ್ತದೆ. ಈ ಕಾರ್ಯನಿರತ ತತ್ತ್ವಲಹರಿಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಈ ದಿನ ಓಂ ನಮೋ ಭಗವತೇ ವಾಸುದೇವಾಯ|’ ಈ ನಾಮಜಪವನ್ನು ಹೆಚ್ಚೆಚ್ಚು ಮಾಡಿರಿ.

ಕೃಷ್ಣಗಾಯತ್ರಿ:
ದೇವಕೀನಂದನಾಯ ವಿದ್ಮಹೇ | ವಾಸುದೇವಾಯ ಧೀಮಹಿ |
ತನ್ನೋ ಕೃಷ್ಣಃ ಪ್ರಚೋದಯಾತ್ ||

ಅರ್ಥ : ನಾವು ದೇವಕೀಪುತ್ರ ಕೃಷ್ಣನನ್ನು ಅರಿತಿದ್ದೇವೆ. ವಾಸುದೇವನ ಧ್ಯಾನ ಮಾಡುತ್ತೇವೆ. ಆ ಕೃಷ್ಣನು ನಮ್ಮ ಬುದ್ಧಿಗೆ ಸತ್ ಪ್ರೇರಣೆ ಕೊಡಲಿ. ರಂಗೋಲಿ ಚಿತ್ರವನ್ನು ಈ ಲೇಖನದ ಕೆಳಗೆ ಚಿತ್ರಿಸಲಾಗಿದೆ.
ಆಧಾರ : Sanatan.org
ಸಂಗ್ರಹ: ವಿನೋದ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆಪ್ಟೆಂಬರ್ 5ರಂದು ದೊಡ್ಡಬಳ್ಳಾಪುರದಲ್ಲಿ ಪ್ರಜಾ ಆಂದೋಲನ ಸಭೆಶ್ರೀಕೃಷ್ಣ ಜನ್ಮಾಷ್ಟಮಿನಟ 'ದುನಿಯಾ' ವಿಜಯ್‌ಹಾಗೂ ನಾಗರತ್ನ ದಾಂಪತ್ಯ ಜೀವನ ಅಂತ್ಯ, 2 ಕೋಟಿ ಜೀವನಾಂಶ: ಹೈಕೋರ್ಟ್‌!ಕೆಪಿಎಸ್‌ಸಿ ಅಕ್ರಮ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಅಸ್ತ್ರಕ್ಕೆ ಸಜ್ಜಾದ ರಾಜ್ಯ ಸರ್ಕಾರ!ಕೆರೆ ನೀರಿನಲ್ಲಿ ಅಡಗಿದ್ದ ಕಳ್ಳನನ್ನು ಸಿನಿಮೀಯ ರೀತಿ ನೀರಿಗೆ ಇಳಿದು ಹಿಡಿದ ಪೊಲೀಸರುಎಇಇ ಅಕ್ರಮ ನೇಮಕಾತಿ: ಪ್ರಿಯಾಂಕ್ ಖರ್ಗೆಗೆ 10 ನೇರ ಪ್ರಶ್ನೆ ಕೇಳಿದ ಹೆಚ್.ಡಿ. ಕುಮಾರಸ್ವಾಮಿಮತದಾರರ ಪಟ್ಟಿಯಲ್ಲಿ ಎಪಿಕ್ ಸಂಖ್ಯೆ ಯಥಾವತ್, ಹೆಸರು ಬದಲಾವಣೆ: ಹೈಕೋರ್ಟ್ ನೋಟಿಸ್ಕೋಮು ಸೌಹಾರ್ದತೆ ಕದಡುವುದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ: ಹೈಕೋರ್ಟ್ಬೆಂಗಳೂರಿನಲ್ಲಿ 'ಸಮಗ್ರ ಪಾರ್ಕಿಂಗ್‌ನಿಯಮ'ಗಳ ಕರಡು ಪ್ರಕಟ: ಮನೆ ಮುಂದೆ ಪಾರ್ಕಿಂಗ್‌ಗೆ ಬ್ರೇಕ್!ನೈಸ್ ರಸ್ತೆ ಸಂತ್ರಸ್ತ ರೈತರಿಗೆ ಸಿಹಿ ಸುದ್ದಿ: 1 ಎಕರೆಗೆ ಗರಿಷ್ಠ 15 ನಿವೇಶನ ಪರಿಹಾರ ನೀಡಲು ಸಂಪುಟ ಉಪಸಮಿತಿ ನಿರ್ಧಾರ