Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸೆಪ್ಟೆಂಬರ್ 5ರಂದು ದೊಡ್ಡಬಳ್ಳಾಪುರದಲ್ಲಿ ಪ್ರಜಾ ಆಂದೋಲನ ಸಭೆ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ಆವರಣದಲ್ಲಿ ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಮೊದಲ ಪ್ರಜಾ ಸೇವಾ ಆಂದೋಲನ ಸಭೆ ಶಾಸಕ ಧೀರಜ್ ಮುನಿರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾಲ್ಲೂಕಿನ ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಅಹವಾಲುಗಳನ್ನು ಸಲ್ಲಿಸಬೇಕು ಎಂದು ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ ಹೇಳಿದರು.
 
ಅವರು ಈ ಬಗ್ಗೆ ಮಾಹಿತಿ ನೀಡಿ, ಪ್ರಜಾ ಸೇವಾ ಇಲಾಖೆಯು ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ವಿನೂತನ ಕಾರ್ಯಕ್ರಮವಾದ ಪ್ರಜಾ ಸೇವಾ ಜನಾಂದೋಲನವಾಗಿದೆ. ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೇಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರ ಮನೆಬಾಗಿಲಿಗೆ ಮುಖ್ಯಮಂತ್ರಿಗಳ ಸಂದೇಶ ಪತ್ರ, ಕುಂದು ಕೊರತೆ ಅರ್ಜಿ ನಮೂನೆ ವಿತರಿಸಲು ಪಿಡಿಒ ಸೇರಿದಂತೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರು ಅರ್ಜಿ ನಮೂನೆ ಪಡೆದು ಯಾವ ಇಲಾಖೆಗೆ ಸಂಬಂಧಿಸಿದ ಸೌಲಭ್ಯ, ಅಹವಾಲು ಇದೆ ಎಂಬುದನ್ನು ಭರ್ತಿ ಮಾಡಿ ಕೌಂಟರ್ ಗಳಲ್ಲಿ ನೀಡಬೇಕು. ಸ್ಥಳದಲ್ಲಿ ಪರಿಹರಿಸುವ ಅಹವಾಲುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಪರಿಹರಿಸಲಾಗುವುದು, ಉಳಿದ ಅರ್ಜಿಗಳನ್ನು ಸ್ವೀಕರಿಸಿ, ಸ್ವೀಕೃತಿಯನ್ನು ಅರ್ಜಿದಾರರಿಗೆ ನೀಡಲಾಗುವುದು ಎಂದರು.

Advertisement

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೆಪ್ಟೆಂಬರ್ 5ರಂದು ದೊಡ್ಡಬಳ್ಳಾಪುರದಲ್ಲಿ ಪ್ರಜಾ ಆಂದೋಲನ ಸಭೆಶ್ರೀಕೃಷ್ಣ ಜನ್ಮಾಷ್ಟಮಿನಟ 'ದುನಿಯಾ' ವಿಜಯ್‌ಹಾಗೂ ನಾಗರತ್ನ ದಾಂಪತ್ಯ ಜೀವನ ಅಂತ್ಯ, 2 ಕೋಟಿ ಜೀವನಾಂಶ: ಹೈಕೋರ್ಟ್‌!ಕೆಪಿಎಸ್‌ಸಿ ಅಕ್ರಮ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಅಸ್ತ್ರಕ್ಕೆ ಸಜ್ಜಾದ ರಾಜ್ಯ ಸರ್ಕಾರ!ಕೆರೆ ನೀರಿನಲ್ಲಿ ಅಡಗಿದ್ದ ಕಳ್ಳನನ್ನು ಸಿನಿಮೀಯ ರೀತಿ ನೀರಿಗೆ ಇಳಿದು ಹಿಡಿದ ಪೊಲೀಸರುಎಇಇ ಅಕ್ರಮ ನೇಮಕಾತಿ: ಪ್ರಿಯಾಂಕ್ ಖರ್ಗೆಗೆ 10 ನೇರ ಪ್ರಶ್ನೆ ಕೇಳಿದ ಹೆಚ್.ಡಿ. ಕುಮಾರಸ್ವಾಮಿಮತದಾರರ ಪಟ್ಟಿಯಲ್ಲಿ ಎಪಿಕ್ ಸಂಖ್ಯೆ ಯಥಾವತ್, ಹೆಸರು ಬದಲಾವಣೆ: ಹೈಕೋರ್ಟ್ ನೋಟಿಸ್ಕೋಮು ಸೌಹಾರ್ದತೆ ಕದಡುವುದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ: ಹೈಕೋರ್ಟ್ಬೆಂಗಳೂರಿನಲ್ಲಿ 'ಸಮಗ್ರ ಪಾರ್ಕಿಂಗ್‌ನಿಯಮ'ಗಳ ಕರಡು ಪ್ರಕಟ: ಮನೆ ಮುಂದೆ ಪಾರ್ಕಿಂಗ್‌ಗೆ ಬ್ರೇಕ್!ನೈಸ್ ರಸ್ತೆ ಸಂತ್ರಸ್ತ ರೈತರಿಗೆ ಸಿಹಿ ಸುದ್ದಿ: 1 ಎಕರೆಗೆ ಗರಿಷ್ಠ 15 ನಿವೇಶನ ಪರಿಹಾರ ನೀಡಲು ಸಂಪುಟ ಉಪಸಮಿತಿ ನಿರ್ಧಾರ