ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಬರ ಪರಿಸ್ಥಿತಿಯ ಪರಿಶೀಲನೆಯ ಸಂದರ್ಭದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ತಮ್ಮ ಬದುಕಿಗೆ ಹೇಗೆ ನೆರವಾಗುತ್ತಿವೆ ಮತ್ತು ತಂದಿರುವ ಬದಲಾವಣೆಗಳೇನು ಎಂಬುದನ್ನು ಜನರು ಅತ್ಯಂತ ಆತ್ಮೀಯವಾಗಿ ಹಂಚಿಕೊಂಡಿರುವುದು ಮನಸ್ಸಿಗೆ ಸಂತಸ ತಂದಿದೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜನರ ಸೇವೆಗೆ ಬದ್ಧತೆ: ಜನರ ಕಷ್ಟಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸುವುದು, ಅವರ ಬದುಕಿಗೆ ಆಸರೆಯಾಗುವುದು ಮತ್ತು ರಾಜ್ಯದ ಪ್ರತಿಯೊಂದು ಕುಟುಂಬವೂ ನೆಮ್ಮದಿಯಿಂದ ಜೀವಿಸುವಂತೆ ಮಾಡುವುದು ನಮ್ಮ ಸರ್ಕಾರದ ಮುಖ್ಯ ಸಂಕಲ್ಪವಾಗಿದೆ.
ಆದ್ಯತೆ ಹಾಗೂ ಮುಖ್ಯ ಗುರಿ: ನಾಡಿನ ಜನರ ಸಮೃದ್ಧಿಯೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಅವರ ಮುಖದಲ್ಲಿ ಕಾಣುವ ಸಂತೋಷವೇ ನಾವು ನೀಡುತ್ತಿರುವ ಸೇವೆಗೆ ಸಿಗುವ ನಿಜವಾದ ಫಲವಾಗಿದೆ.
ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವಂತೆ ಮಾಡಲು ರಾಜ್ಯ ಸರ್ಕಾರ ಸರ್ವಪ್ರಯತ್ನ ನಡೆಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.




