Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೀಟ್ ಪರೀಕ್ಷೆ ರದ್ದತಿ ದೇಶಕ್ಕೇ ದೊಡ್ಡ ಅಪಮಾನ: ಡಿ.ಕೆ. ಶಿವಕುಮಾರ್

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ನೀಟ್ (NEET) ಪರೀಕ್ಷೆ ರದ್ದಾಗಿರುವುದು ಇಡೀ ದೇಶಕ್ಕೆ ಮತ್ತು ಶೈಕ್ಷಣಿಕ ವ್ಯವಸ್ಥೆಗೆ ಆದ ದೊಡ್ಡ ಅಪಮಾನ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮಗಳ ಬಗ್ಗೆ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದಲ್ಲದೆ, ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

​ವಿದ್ಯಾರ್ಥಿಗಳ ಕನಸಿಗೆ ಬಿದ್ದ ಪೆಟ್ಟು:
​"
ಮಕ್ಕಳು ತಮ್ಮ ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಕನಸು ಹೊತ್ತು ಹಗಲಿರುಳು ಕಷ್ಟಪಟ್ಟು ಓದಿರುತ್ತಾರೆ. ಆದರೆ ಇಂತಹ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಅವರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆಯುವಂತೆ ಮಾಡಿದೆ," ಎಂದು ಅವರು ಕಳವಳ ವ್ಯಕ್ತಪಡಿಸಿದರು.

​ಬಿಜೆಪಿ ಸಂಸದರ ಮೌನಕ್ಕೆ ಪ್ರಶ್ನೆ:
​ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ. ಶಿವಕುಮಾರ್, ಈ ವೈಫಲ್ಯಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. "ಬೇರೆ ವಿಷಯಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ಈಗ ಈ ವಿಚಾರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಇದು ಯಾರ ವೈಫಲ್ಯ ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು," ಎಂದು ಆಗ್ರಹಿಸಿದರು.

​ಹಗರಣಗಳ ಸರಣಿ:
​ಹಿಂದಿನ ಪ್ರಕರಣಗಳನ್ನು ಸ್ಮರಿಸಿದ ಅವರು, "ಈ ಹಿಂದೆ ನಾವು ಪಿಎಸ್‌ಐ ಹಗರಣ ಸೇರಿದಂತೆ ಹಲವು ಅಕ್ರಮಗಳನ್ನು ನೋಡಿದ್ದೇವೆ. ಈಗ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲೂ ಇಂತಹ ಅಕ್ರಮ ನಡೆದಿರುವುದು ದುರದೃಷ್ಟಕರ. ಇದಕ್ಕೆ ಕೇಂದ್ರ ಸರ್ಕಾರ ಮತ್ತು ಅವರ ಪ್ರತಿನಿಧಿಗಳು ಉತ್ತರಿಸಲೇಬೇಕು," ಎಂದು ಒತ್ತಾಯಿಸಿದರು.

​ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಸಂಕಷ್ಟಕ್ಕೀಡಾಗಿರುವ ಲಕ್ಷಾಂತರ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ಅವರು, ಈ ಹಗರಣದ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾವಣ್ಯ ಕಾಲೇಜಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಜಿಕೆವಿಕೆಯಲ್ಲಿ ವೈವಿಧ್ಯಮಯ ‘ರೈತ ಸಂತೆ’: ಗೋಧಿ ಪಾಯಸ, ಬಟರ್ ಫ್ರೂಟ್ ಹಾಗೂ ಅವರೆಕಾಳು ಸಿಪ್ಪೆ ತೆಗೆಯುವ ಯಂತ್ರಕ್ಕೆ ಭಾರಿ ಬೇಡಿಕೆಜುಲೈ 10 ರಿಂದ 12ರವರೆಗೆ ಬೆಂಗಳೂರಿನ ಜಿಕೆವಿಕೆಯಲ್ಲಿ “ಸಸ್ಯ ಸಂತೆ” ಆಯೋಜನೆ, ಮಳಿಗೆ ಕಾಯ್ದಿರಿಸಲು ಅವಕಾಶಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‘ಕಲ್ಲಿನ ಕೋಟೆ ಕಾವ್ಯೋತ್ಸವ’ ವೈಭವ: ಆರು ಪ್ರಮುಖ ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ ಯಶಸ್ವಿ!ಜೂನ್ 29ರಂದು ಜಿ.ಎಸ್.ಉಜ್ಜನಪ್ಪ ಅವರ ನೆನಪಿನಲ್ಲಿ “ಸ್ವಾತಂತ್ರ್ಯದ ಓಟ” ನಾಟಕ ಪ್ರದರ್ಶನಕೆಂಪೇಗೌಡರ ದೂರದೃಷ್ಟಿ ಆಡಳಿತಗಾರರಿಗೆ ಆದರ್ಶ- ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ50 ವರ್ಷಗಳ ಬಳಿಕ ಒಂದಾದ ಬಾಲ್ಯದ ಗೆಳೆಯರು: ಕಣ್ಣಾಲಿಗಳು ತುಂಬಿ ಬಂದ ಚಿನ್ಮುಲ್ಲಾದ್ರಿ ಶಾಲೆಯ ‘ಸುವರ್ಣ ಸಂಭ್ರಮ’!ಸಿಎಂಗೆ ಸೋಮಣ್ಣ ಕಿವಿಮಾತು, ವಿಜಯೇಂದ್ರಗೆ ನಿರಾಣಿ ಸಲಹೆ: ದಾವಣಗೆರೆಯಲ್ಲಿ ಬಿಜೆಪಿ ನಾಯಕರ ಭರ್ಜರಿ ಬ್ಯಾಟಿಂಗ್!ಬೆಂಗಳೂರಿಗೆ ಸಿಕ್ತು ಹೊಸ ಮೆಗಾ ಕನೆಕ್ಟಿವಿಟಿ: ಎಸ್.ಎಂ. ಕೃಷ್ಣ ಹೆಸರಿನ ಭವ್ಯ 'ದಶಪಥ ರಸ್ತೆ' ಲೋಕಾರ್ಪಣೆ!