ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪೆಎಸ್ ಸಿ ಕಾರ್ಯವೈಖರಿಗೆ ಇದು ಯಾವ ಸೀಮೆ ಲೋಕಸೇವಾ ಆಯೋಗ ? ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಎಡವಟ್ಟು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಒಂದು ಪರೀಕ್ಷೆಯನ್ನು ನೆಟ್ಟಗೆ, ಸುಸೂತ್ರವಾಗಿ ನಡೆಸುವ ಯೋಗ್ಯತೆ ಇಲ್ಲವಾಗಿದೆ.
ಸಿದ್ದರಾಮಯ್ಯ ಸರ್ಕಾರದ ಬೇಜಾವ್ದಾರಿಯಿಂದ ರಾಜ್ಯದ ಸಾವಿರಾರು ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಲೇ ಇದೆ ಎಂದು ಜೆಡಿಎಸ್ ಕಿಡಿಕಾರಿದೆ. ಸರ್ಕಾರಿ ಉದ್ಯೋಗಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿರುವ ಅಕಾಂಕ್ಷಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ.
ರಾಜ್ಯದಲ್ಲಿ ಕೆಎಎಸ್ ನೇಮಕಾತಿ ವರ್ಷಾನುಗಟ್ಟಲೇ ಆದರೂ ಪೂರ್ಣಗೊಳ್ಳದಿರುವುದು ಮತ್ತು 2023-24ನೇ ಸಾಲಿನ 384 ಹುದ್ದೆಗಳ ಪ್ರೊಬೆಷನರಿ “ಎ” ಮತ್ತು “ಬಿ” ವೃಂದದ ನೇಮಕ ಪ್ರಕ್ರಿಯೆಯಲ್ಲಿಯು ಆಗಿರುವ ಪ್ರಮಾಣ ಪರೀಕ್ಷಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹೊಣೆಗಾರಿಕೆ ಮರೆತು ಪದೇಪದೇ ತಪ್ಪು ಮಾಡುತ್ತಿರುವ KPSCಯನ್ನು ಸುಧಾರಣೆ ಮಾಡಲು ಸಾಧ್ಯವಾಗದಷ್ಟು ದುರ್ಬಲವಾಗಿರುವ ಕಾಂಗ್ರೆಸ್‌ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಕೇವಲ ಮರೀಚಿಕೆಯಾಗಿದೆ ಎಂದು ಜೆಡಿಎಸ್ ಟೀಕಿಸಿದೆ.