ಉದ್ಯಮ-ಉದ್ಯೋಗ ಸೃಷ್ಟಿಯಲ್ಲಿ ಹೊಸ ಇತಿಹಾಸ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಕಳೆದ
3 ವರ್ಷಗಳ ಅವಧಿಯಲ್ಲಿ ಉದ್ಯಮ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಹೊಸ ಇತಿಹಾಸವೇ ಸೃಷ್ಟಿಯಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.

ನಮ್ಮ ಸರ್ಕಾರವು ಭವಿಷ್ಯದ ಕೈಗಾರಿಕಾ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ನೂತನ ಕೈಗಾರಿಕಾ ನೀತಿಗಳು, ಕೈಗಾರಿಕಾ ಸ್ನೇಹಿ ಉದ್ಯಮ ಪರಿಸರ, ಕೈಗಾರಿಕೆಗಳಿಗೆ ಬೇಕಾದ ಅಗತ್ಯ ಮೂಲಸೌಕರ್ಯ ಒದಗಿಸಿದ ಪರಿಣಾಮ ಈ ಅವಧಿಯಲ್ಲಿ ದಾಖಲೆಯ ಹೂಡಿಕೆ ರಾಜ್ಯಕ್ಕೆ ಹರಿದು ಬಂದಿದ್ದು ಈಗಾಗಲೇ ಅನುಷ್ಠಾನದಲ್ಲಿದೆ ಎಂದು ತಿಳಿಸಿದರು.

- Advertisement - 

3 ವರ್ಷಗಳ ಅವಧಿಯಲ್ಲಿ ಸುಮಾರು 117 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು 6.70+ ಲಕ್ಷ ಕೋಟಿ ಹೂಡಿಕೆಯಾಗಿದೆ. ಇದರಿಂದಾಗಿ 2.47+ ಲಕ್ಷ ನೇರ ಉದ್ಯೋಗಳ ಸೃಷ್ಟಿ ದೃಢವಾಗಿದೆ. ಇದು ರಾಜ್ಯದ ಕೈಗಾರಿಕಾ ಪ್ರಗತಿಯಲ್ಲಿ ಹೊಸ ಇತಿಹಾಸವೆಂದೇ ಹೇಳಬಹುದು. ರಾಜ್ಯದ ಕೈಗಾರಿಕಾ ಪ್ರಗತಿಗೆ ನಮ್ಮ ಪ್ರಯತ್ನ ಮುಂದುವರಿಯಲಿದ್ದು ಇನ್ನಷ್ಟು ಸಾಧನೆಗೆ ಕರ್ನಾಟಕವು ಸಾಕ್ಷಿಯಾಗಲಿದೆ ಎಂದು ಸಚಿವ ಪಾಟೀಲ್ ಹೇಳಿದರು.

 

- Advertisement - 

 

Share This Article
error: Content is protected !!
";